20 ರಿಂದ ವರ್ಷಪೂರ್ತಿ ಶಾಲಾ-ಕಾಲೇಜುಗಳಲ್ಲಿ ಡಾ.ಪುತಿನ

13mlk1
ಮೇಲುಕೋಟೆಯ ಕಲಾಮಂದಿರದಲ್ಲಿ ಪುತಿನ ಸಂಸ್ಮರಣೆಯ ಅಂಗವಾಗಿ ಪುತಿನ ಪ್ರತಿಮೆಗೆ ಜಿ.ಕೆ ಕುಮಾರ್ ಮಾಲಾರ್ಪಣೆ ಮಾಡಿದರು. ಡಾ.ಬಿ.ವಿನಂದೀಶ್, ಸ್ಥಾನೀಕಂ ಸಂತಾನರಾಮನ್, ವೆಂಕಟೇಶ್ ದೃಶ್ಯಗಿರೀಶ್, ಕೃಷ್ಣಪ್ಪ ಇದ್ದರು.
Published on

ಮೇಲುಕೋಟೆ : ಖ್ಯಾತಕವಿ ಪು.ತಿ.ನ. ಅವರ ಪುಣ್ಯ ಸಂಸ್ಮರಣೆ ಅಂಗವಾಗಿ ಅ.20 ರಿಂದ ವರ್ಷಪೂರ್ತಿ ‘ಶಾಲಾ-ಕಾಲೇಜುಗಳಲ್ಲಿ ಡಾ.ಪುತಿನ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ತಿಳಿಸಿದರು.

ಪುತಿನ ಸಂಸ್ಮರಣೆ ಅಂಗವಾಗಿ ಮೇಲುಕೋಟೆಯ ಕವಿ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿ ಮಾತನಾಡಿದರು.

ಕಲಾಮಂದಿರದಲ್ಲಿ ತಿಂಗಳೊಂದಾದರೂ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕೆಂಬುದು ನಮ್ಮ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಕವಿಯ ಹುಟ್ಟೂರಾದ ಮೇಲುಕೋಟೆಯಲ್ಲಿ ಅ.20ರಂದು ನರಕಚತುರ್ದಶಿ ಉತ್ಸವದಂದು ಪುತಿನ ಸಂಸ್ಮರಣೆ ವಿಸ್ತತ ಕಾರ್ಯಕ್ರಮ ಹಾಗೂ ಶಾಲಾ-ಕಾಲೇಜುಗಳಲ್ಲಿ ಡಾ.ಪು.ತಿ.ನ. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಸಿಇಒ ಕೆ.ಆರ್.ನಂದಿನಿ, ಎಸಿ ಕೆ.ಆರ್.ಶ್ರೀನಿವಾಸ್, ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ. ಕೃಷ್ಣೇಗೌಡ, ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡಾ.ಮೀರಾಶಿವಲಿಂಗಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಜಯಪ್ರಕಾಶಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಪ್ರಭಾರ ಅಧ್ಯಕ್ಷ ಜಿ.ಕೆ ಕುಮಾರ್, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಪು.ತಿ.ನ. ಕಲಾಮಂದಿರ ವ್ಯವಸ್ಥಾಪಕ ವೆಂಕಟೇಶ್, ರಂಗನಿರ್ದೇಶಕ ದೃಶ್ಯಗಿರೀಶ್, ಶಿಕ್ಷಕ ಕೃಷ್ಣಪ್ಪ ಭಾಗವಹಿಸಿದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net