

ಕುಮಟಾ: ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಕೆಪಿಟಿಸಿ ಎಂಪ್ಲಾಯೀಸ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಮತ್ತು ಪುರುಷರ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಉಪನ್ಯಾಸಕಿ ಡಾ. ಪ್ರತಿಭಾ ಭಟ್ ಅವರು ಮಾಸ್ಟರ್ಸ್ 1 ಮಹಿಳೆಯರ, 63 ಕೆಜಿ ದೇಹ ತೂಕ ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಗೆದ್ದಿದ್ದಾರೆ.
ಪ್ರಭು ಫಿಟ್ನೆಸ್ ಸೆಂಟರ್ನಲ್ಲಿ ವೆಂಕಟೇಶ್ ಪ್ರಭು ಅವರಿಂದ ತರಬೇತಿ ಪಡೆದಿದ್ದಾರೆ.
ಇವರು ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಂಗಾರದ ಪದಕ ಪಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಮಹಿಳೆ ಎಂದು ತರಬೇತು ನೀಡಿದ ಪ್ರಭು ಫಿಟ್ನೆಸ್ ಸೆಂಟರ್ನ ತರಬೇತುದಾರ ವೆಂಟಕೇಶ ಪ್ರಭು ತಿಳಿಸಿದ್ದಾರೆ.