ಎಸ್‌ಐಪಿಎಂಎ ಅಧ್ಯಕ್ಷರಾಗಿ ಡಾ. ಪ್ರಶಾಂತ್.ಎಂ.ಎ. ಆಯ್ಕೆ

mng-25feb-dr prashanth m a
Published on


ಮಂಗಳೂರು : ಸೌತ್ ಇಂಡಿಯಾ ಪ್ಲೈವುಡ್ ಮ್ಯಾನುಫ್ಯಾಕ್ಚರ್ ಅಸೋಸಿಯೇಷನ್(ಎಸ್‌ಐಪಿಎಂಎ)ನ ಅಧ್ಯಕ್ಷರಾಗಿ ಡಾ. ಪ್ರಶಾಂತ್.ಎಂ.ಎ.ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಿತೇಂದ್ರ ಪಟೇಲ್ ನೆಲಮಂಗಲ, ಕಾರ್ಯದರ್ಶಿಯಾಗಿ ಹರಿರಾಯ ಕಾಮತ್ ಸುಳ್ಯ ಆಯ್ಕೆಯಾಗಿದ್ದಾರೆ.ಕೊಚ್ಚಿನ್‌ನಲ್ಲಿ ಜನಿಸಿದ ಡಾ. ಪ್ರಶಾಂತ್.ಎಂ.ಎ. ಅವರು 90ರ ದಶಕದಲ್ಲಿ ಎಕೆ ಆ್ಯಪಲ್ ಪ್ಲೈ ಸಂಸ್ಥೆಗೆ ಸೇರಿದ್ದು, ಪ್ರಸ್ತುತ ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಕಳೆದ 30 ವರ್ಷದಿಂದ ಎಕೆ ಆ್ಯಪಲ್ ಪ್ಲೈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. 1984ರಲ್ಲಿ ಸ್ಥಾಪನೆಯಾದ ಎಕೆ ಆ್ಯಪಲ್ ಪ್ಲೈ ಸಂಸ್ಥೆಯನ್ನು ಸ್ಥಾಪಕ ಚೇರ್ಮನ್ ದಿ. ಎಂ.ಅಹ್ಮದ್ ಅವರು ದೂರದೃಷ್ಟಿತ್ವ ಹಾಗೂ ಬದ್ಧತೆಯಿಂದ ಕಟ್ಟಿ ಬೆಳೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದು ಈಗ ಎಸ್‌ಐಪಿಎಂಎ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ ಎಂದು ಡಾ.ಪ್ರಶಾಂತ್.ಎಂ.ಎ.ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net