ಹುಬ್ಬಳ್ಳಿ: ಅತೀವೃಷ್ಟಿಯಿಂದಾಗಿ ಆಂಧ್ರಪ್ರದೇಶದಲ್ಲಿ ಉಂಟಾಗಿರುವ ತೊಂದರೆ, ಜನರ ಸಮಸ್ಯೆಗಳಿಗೆ ನಗರದ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಮಿಡಿದಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪ್ರವಾಹ ಪೀಡಿತರಿಗೆ ತಮ್ಮಿಂದಾದ ಸಹಾಯ ಮಾಡಿದ್ದಾರೆ.
ಆಂಧ್ರ ಮೂಲದವರಾದ ಪ್ರಸಾದ ಅವರ ಕುಟುಂಬದ ಅನೇಕರು ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ.
ಅದೇ ರೀತಿ ಸ್ವರ್ಣ ಗ್ರುಪ್ ಆಫ್ ಕಂಪನಿಸ್ ವತಿಯಿಂದ 25 ಲಕ್ಷ ರೂ.ಗಳನ್ನು ಡಾ. ಪ್ರಸಾದ ಸಿಎಂ ನಿಧಿಗೆ ದೇಣಿಗೆ ನೀಡಿದ್ದಾರೆ.
ಅಲ್ಲದೇ ತಮ್ಮ ಹುಟ್ಟೂರು ಗೊಲ್ಲಪುಡಿಯಲ್ಲಿ ಕೈಗೊಳ್ಳಲಾಗುವ ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.