

ಬೈಲಹೊಂಗಲ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ಡಿಪ್ಲೊಮಾ) ಹಾಗೂ ಮರಕುಂಬಿಯ ಇನಾಮದಾರ ಶುಗರ್ಸ್ ಆಶ್ರಯದಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಜನ್ಮದಿನದ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಈಚೆಗೆ ಸಸಿ ನೆಡುವುದು ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ಇನಾಮದಾರ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಸಮಾಜ, ಕೃಷಿ, ಆರೋಗ್ಯ, ಸಾಂಸ್ಕೃತಿಕ ಸಹಕಾರ ಸೇರಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಹುಮುಖಿ ನಾಯಕ ಎಂದರು. ಕೆಎಲ್‌ಇ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಎಸ್.ತಟವಟಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಆಸರೆಯಾಗಿದೆ ಎಂದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬಿಸ್ಕತ್ತು ಮತ್ತು ಬ್ರೆಡ್ ವಿತರಿಸಲಾಯಿತು.
ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ಶ್ರೀಧರ ನಿರಡಿ ಪ್ರಾಸ್ತಾವಿಕ ಮಾತನಾಡಿದರು. ಪಿಯುಸಿ ಪ್ರಾಚಾರ್ಯ ಎಸ್.ಬಿ.ತಟವಟಿ, ಬಿಸಿಎ ಕಾಲೇಜಿನ ಪ್ರಾಚಾರ್ಯ ವಿಶ್ವನಾಥ ಪಾಟೀಲ, ಡಾ.ನಿರ್ಮಲಾ ಮಹಾಂತಶೆಟ್ಟಿ, ಡಾ.ವಿದ್ಯಾ ಯಡಳ್ಳಿ, ಐ.ಎನ್. ಹಾದಿಮನಿ, ಎಸ್.ಎಂ. ಕಳಸಣ್ಣವರ, ಎಸ್.ಎಸ್. ಶರಣಪ್ಪನವರ, ಎಚ್.ಐ. ಸಂಕಣ್ಣವರ, ವಿ.ಬಿ.ಪಾಟೀಲ, ಆರ್.ಎನ್.ವಾರಿ, ವಿ.ಎ. ಬಡಿಗೇರ, ಬಿ.ಎಂ. ಕುರಬೆಟ್ಟ, ಎಂ.ಎ.ಸವದತ್ತಿಮಠ, ಎಂ.ಬಿ.ಕಡಬಿ, ವಿ.ಆರ್.ಶಿದ್ನಾಳ, ಎಸ್.ಎಸ್.ಬಿಳ್ಳೂರ, ಆರ್.ಪಿ.ದೊಡ್ಡಹುಬ್ಬಳ್ಳಿ, ಎಸ್.ಎಸ್.ಹಳ್ಳೂರ, ಎ.ಜಿ.ಬಡಿಗೇರ, ಎಸ್.ಎಸ್.ಶಹಾಪುರ, ವಿ.ವಿ.ಪಾಟೀಲ ಇತರರಿದ್ದರು.