ಡಾ.ಪ್ರಭಾಕರ ಸೊಸೈಟಿ ನವೀಕೃತ ಬ್ರ್ಯಾಂಚ್ ಉದ್ಘಾಟನೆ

IMG20250717202001.jpg
Published on

ಬೆಳಗಾವಿ: ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಆರ್ಥಿಕ ಬಲವರ್ಧನೆ ಹೆಚ್ಚಿಸಲು ಮುಂಬರುವ ದಿನಗಳಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ 20ಕ್ಕೂ ಅಧಿಕ ಶಾಖೆ ತೆರೆಯಲಾಗುವುದು ಎಂದು ಸಂಸ್ಥೆಯ ಕೆಎಲ್‌ಇ ನಿರ್ದೇಶಕ, ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಆಮಂತ್ರಿತ ನಿರ್ದೇಶಕ ಅಮಿತ್ ಕೋರೆ ಹೇಳಿದರು.

ಬೆಳಗಾವಿಯ ಶ್ರೀನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನವೀಕೃತ ಶಾಖೆ ಉದ್ಘಾಟನೆ ಹಾಗೂ ಶಾಖೆ 10 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ ಸಂಕಲ್ಪ ಪೂರ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯೆ ಡಾ.ಪ್ರೀತಿ ದೊಡವಾಡ ಮಾರ್ಗದರ್ಶನದಲ್ಲಿ ಸಹಕಾರಿ ಸಂಘವು ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಖೆ ತೆರೆದು ಸೇವೆ ನೀಡುತ್ತಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸದಸ್ಯರು ಮತ್ತು ಗ್ರಾಹಕರಿಗೆ ತ್ವರಿತ ಸೇವೆ ನೀಡುತ್ತಿದೆ ಎಂದರು.

ಶಾಖೆಯು ಅತಿ ಕಡಿಮೆ ಅವಧಿಯಲ್ಲಿ 10 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿದೆ. ಜನರಿಗೆ 1.50 ಕೋಟಿ ರೂ. ಸಾಲ ನೀಡಿದೆ. ಆರ್ಥಿಕ ವರ್ಷ 2024-25ರ ಅಂತ್ಯದಲ್ಲಿ ಸಂಸ್ಥೆಯು ಷೇರು ಬಂಡವಾಳ 4.46 ಕೋಟಿ ರೂ., ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 140.83 ಕೋಟಿ ರೂ., 1511.28 ಕೋಟಿ ರೂ. ಠೇವಣಿ, ಸಾಲ ಮತ್ತು ಮುಂಗಡಗಳು 1063.56 ಕೋಟಿ ರೂ., ಗುಂತಾವಣೆಗಳು 579.56 ಕೋಟಿ ರೂ., ಬ್ಯಾಂಕ್ ಖಾತೆಗಳಲ್ಲಿನ ಶಿಲ್ಕು 109.61 ಕೋಟಿ ರೂ., ದುಡಿಯುವ ಬಂಡವಾಳ 1656.57 ಕೋಟಿ ರೂ., ವಾರ್ಷಿಕ ವಹಿವಾಟು 22,076.36 ಕೋಟಿ ರೂ., ನಿವ್ವಳ ಲಾಭ 25.30 ಕೋಟಿ ರೂ. ಹೊಂದಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸಂಸ್ಥೆಯ ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ, ಡಾ.ಪ್ರೀತಿ ದೊಡವಾಡ, ಅಣ್ಣಾಸಾಹೇಬ ಸಂಕೇಶ್ವರಿ, ಬಸನಗೌಡ ಆಸಂಗಿ, ಸುಕುಮಾರ ಚೌಗುಲೆ, ಪಿಂಟು ಹಿರೇಕುರುಬರ, ಅಮಿತ್ ಜಾಧವ, ಪ್ರಫುಲ್ ಶೆಟ್ಟಿ, ಅನಿಲ ಪಾಟೀಲ, ಶೋಭಾ ಜಕಾತೆ, ಪಾರ್ವತಿ ಧರನಾಕ, ಜಯಶ್ರೀ ಮೇದಾರ, ಶ್ರೀಕಾಂತ್ ಉಮರಾನೆ, ವಿವೇಕ್ ಕಮತೆ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಧರೆಪ್ಪ ಕೇರೂರೆ, ನಿರ್ದೇಶಕರಾದ ಮಹಾಂತೇಶ ಸೊಬರದ, ಬಸವರಾಜ ಹಮ್ಮಣ್ಣವರ, ಚಿದಾನಂದ ಬುಕಿಟಗಾರ, ಸೋಮಶೇಖರ ಹಿರೇಮಠ, ಮಯಾಪ್ಪ ತುಳಸಿಗೇರಿ, ಮನೀಷ ಭವಾನೆ, ಸುಭಾಷ ಏಣಗಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ ಎ. ಕರೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net