ಡಾ.ಪ್ರಭಾಕರ ಕೋರೆ ಸೊಸೈಟಿಗೆ 8.99 ಲಕ್ಷ ರೂ.ಲಾಭ

25Huk1
Published on

Dr. Prabhakar, Kore to Society Rs.8.99 Lakhs Profit

ಹುಕ್ಕೇರಿ: ಎರಡು ವರ್ಷದ ಹಿಂದೆ ಆರಂಭವಾದ ಅಂಕಲಿಯ ಡಾ.ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ) ಹುಕ್ಕೇರಿ ಶಾಖೆ ಪ್ರಸಕ್ತ ಸಾಲಿನಲ್ಲಿ 8.99 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಶಾಖೆ ಚೇರ್ಮನ್ ಸದಾನಂದ ಕರಾಳೆ ತಿಳಿಸಿದರು.

ಸ್ಥಳೀಯ ಕೋರ್ಟ್ ವೃತ್ತ ಬಳಿಯ ಶಾಖೆಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೊಸೈಟಿಯ ದ್ವಿತೀಯ ವಾರ್ಷಿಕೋತ್ಸವದ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರಿ ಸಂಸ್ಥಾಪಕ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ರೈತರು, ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಆರ್ಥಿಕ ನೆರವು ಕಲ್ಪಿಸಿದೆ. ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಶಿವಶಕ್ತಿ ಶುಗರ್ಸ್‌ಗೆ ಕಬ್ಬು ಕಳುಹಿಸಿದ ಈ ಭಾಗದ ರೈತರ ಬಿಲ್‌ಗಳನ್ನು ಶಾಖೆ ಮೂಲಕ ವಿತರಿಸಲಾಗುತ್ತಿದೆ ಎಂದರು.

ದ್ವಿತೀಯ ವರ್ಷಕ್ಕೆ ಪದಾರ್ಪಣೆ ಮಾಡಿದ ಶಾಖೆಯಲ್ಲಿ 11.17 ಕೋಟಿ ರೂ. ಠೇವು ಸಂಗ್ರಹಿಸಿ, 46.55 ಲಕ್ಷ ರೂ. ಸಾಲ ವಿತರಿಸಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್, ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಸಾಮಾನ್ಯ ವಿಮೆ, ಆರೋಗ್ಯ ವಿಮೆ ಹಾಗೂ ಜೀವವಿಮೆ ಸೇರಿ ವಿವಿಧ ಸೇವೆ ಒದಗಿಸುತ್ತಿದ್ದು, ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ಸಲಹಾ ಸಮಿತಿ ಸದಸ್ಯರಾದ ಸಿದಗೌಡ ಪಾಟೀಲ, ಕೆಂಪಣ್ಣ ನೇರ್ಲಿ, ಬಸವರಾಜ ಪಾಟೀಲ, ಅಪ್ಪುಗೌಡ ಮಲಗೌಡನವರ, ಕಾಡಪ್ಪ ಮಲ್ಲಾಪುರೆ, ಶಾಖಾ ವ್ಯವಸ್ಥಾಪಕ ಸಚಿನ್ ಪಿಂಪಳಗಾವಿ, ಸಿಬ್ಬಂದಿ ವಿಶಾಲ ಪವಾರ, ಸಂದೀಪ ಪಾಟೀಲ, ಶಂಕರ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net