ಕೆಡೆಟ್​ ಓಂಕಾರಗೆ ಡಾ. ಪ್ರಭಾಕರ ಕೋರೆ ಅಭಿನಂದನೆ

18dvk 9
Published on

ಬೆಳಗಾವಿ: ಕೆಎಲ್​ಇ ಸಂಸ್ಥೆಯ ಲಿಂಗರಾಜ ಪದವಿ ಮಹಾವಿದ್ಯಾಲಯದ ಎನ್​ಸಿಸಿ ಕೆಡೆಟ್​ ಓಂಕಾರ ಪ್ರಕಾಶ ಲೋಗಾವಿ ಈಚೆಗೆ ದೆಹಲಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸೈನಿಕ ಶಿಬಿರಕ್ಕೆ ಆಯ್ಕೆಯಾಗಿದ್ದಾನೆ.

ಓಂಕಾರ 26 ಕರ್ನಾಟಕ ಎನ್​ಸಿಸಿ ಬಟಾಲಿಯನ್​ ಕೆಡೆಟ್​ ಆಗಿದ್ದು, ಮೈಸೂರಿನಲ್ಲಿ ಜರುಗಿದ ನಿರ್ಣಾಯಕ ಅಂತಿಮ ಸುತ್ತಿನ ಸೈನಿಕ ಶಿಬಿರದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಅದ್ವೀತಿಯ ಸಾಧನೆ ಮಾಡಿದ್ದಾನೆ.

ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಪ್ರಧಾನ ಕಚೇರಿಯಲ್ಲಿ ವಿದ್ಯಾರ್ಥಿಯನ್ನು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ. ಕೆಎಲ್​ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಲಿಂಗರಾಜ ಕಾಲೇಜ್​ ಪ್ರಾಚಾರ್ಯ ಡಾ.ಎಚ್​.ಎಸ್​.ಮೇಲಿನಮನಿ, ಎನ್​ಸಿಸಿ ಅಧಿಕಾರಿ ಮೇಜರ್​ ಡಾ.ಮಹೇಶ ಗುರನಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net