ಹಿಂದೂ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಶಯ

mng-16sep-vaishya
Published on



ಮಂಗಳೂರು : ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಶ್ಯ ಸಮಾಜದ ಕುಲ ಗುರು ಶ್ರೀ ವಾಮನಾಶ್ರಮ ಸ್ವಾಮೀಜಿ
ಅವರ ಚಾತುರ್ಮಾಸದ ಅಂಗವಾಗಿ ನವಚಂಡಿಕಾ ಯಾಗ ಜರಗಿತು.
ಈ ಸಂದರ್ಭ ಗುರುಗಳ ಆಶೀರ್ವಾದ ಪಡೆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ‘ಈಗಿನ ಕಾಲಘಟ್ಟದಲ್ಲಿ ಸಂತರ ಪಾತ್ರ ಅತಿ ಮುಖ್ಯವಾದುದು. ಅವರ ಚಿಂತನೆ ಹಾಗೂ ಸಮಾಜ ಬಾಂಧವರಲ್ಲಿ ನಮ್ಮ ಪುರಾತನ ಸನಾತನ ಹಿಂದೂ ಸಂಸ್ಕೃತಿಯ ಬಗ್ಗೆ ಮನೆ ಮನೆಯಲ್ಲಿ
ಜಾಗ್ರತಿಗೊಳಿಸಬೇಕು ಎಂದು ಅವರು ಹೇಳಿದರು.
ದೆೇವಸ್ಥಾನದ ಆಡಳಿತ ಮೊಕ್ತೇಸರ ವರದರಾಯ ನಾಗ್ವೇಕರ್, ಚಾತುರ್ಮಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ನಾಗ್ವೇಕರ್, ಮಾಜಿ ಮೊಕ್ತೇಸರ ಮನೋಜ್ ನಾಯಕ್, ವೈಶ್ಯ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ್.ಪಿ ಶೇಟ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ
ಸುಧಾಕರ ಶೇಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net