ಕುಮಾರವ್ಯಾಸ ಮಹಾಭಾರತ ಪ್ರವಚನ ಮಾಲಿಕೆಯ ಉದ್ಘಾಟನೆ.

28GDG06
ಗದಗ ನಗರದ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಪಾವಗಡ ಪ್ರಕಾಶರಾವ್​ಅವರ ಕುಮಾರವ್ಯಾಸ ಭಾರತದ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಿರ್ಭಯಾನಂದ ಶ್ರಿಗಳು, ಡಾ. ಪಾವಗಡ ಪ್ರಕಾಶರಾವ್​, ಡಿ.ಆರ್​. ಪಾಟೀಲ, ಡಾ. ಎಸ್​. ಬಿ. ಶೆಟ್ಟರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮಾನವೀಯ ಅನುಭವಗಳ ಸಾಗರವಾದ ಮಹಾಭಾರತವು ಜ್ಞಾನದ ಆಗರವಾಗಿದೆ. ಪ್ರತಿಯೊಬ್ಬ ಭಾರತೀಯರು ಇದರ ಆಳವಾದ ಅಧ್ಯಯನ ಮಾಡಬೇಕೆಂದು ರಾಮಕೃಷ ವಿವೇಕಾನಂದ ಆಶ್ರಮದ ಅಧ್ಯ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.
ಇತ್ತೀಚೆಗೆ ಕುಮಾರವ್ಯಾಸ ಮಹಾಭಾರತ ಪ್ರವಚನ ಸಂಚಲನಾ ಸಮಿತಿ ಹಾಗೂ ಎಪಿಎಂಸಿ ಆಶ್ರಯದಲ್ಲಿ ನಗರದ ಕೆ. ಎಚ್​. ಪಾಟೀಲ ಸಭಾಭವನದಲ್ಲಿ ಜರುಗಿದ ಪ್ರವಚನ ಚಕ್ರವತಿರ್ಗಳಾದ ಪಾವಗಡ ಪ್ರಕಾಶರಾವ್​ಅವರ ಕುಮಾರವ್ಯಾಸ ಭಾರತದ ಪ್ರವಚನ ಮಾಲಿಕೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ವ್ಯಾಸ ಮಹಾಭಾರತವು ಒಳಿತು&ಕೆಡಕುಗಳು ವಿಶ್ವಕೋಶದಂತಿದೆ. ಮನುಕುಲಕ್ಕೆ ದಾರಿ ದೀಪವಾಗಿದೆ. ಇಂತಹ ಶ್ರೇಷ್ಠ ಮಹಾಕಾವ್ಯದ ಹತ್ತು ಪರ್ವಗಳನ್ನು ರೂಪಕ ಸೃಷ್ಟಿಕರ್ತ ಆಗಿರುವ ಕುಮಾರವ್ಯಾಸನು ಶ್ರೀಕೃಷ್ಣನನ್ನು ನಾಯಕನನ್ನಾಗಿಸಿ ಪರಮಾದ್ಭುತವಾಗಿ ಹೃದಯಸ್ಪಶಿರ್ಯಾಗಿ ತನ್ನ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ. ಇಂತಹ ಮಹಾಕಾವ್ಯದ ಕುರಿತಾದ ಪ್ರವಚನವನ್ನು ಕೇಳುವ ಸೌಭಾಗ್ಯ ಗದುಗಿನ ಸದ್ಭಕ್ತರಿಗೆ ಪ್ರಾಪ್ತವಾಗಿದೆ. ಈ ಪ್ರವಚನ ಕಾರ್ಯಕ್ರಮದಲ್ಲಿ ನಿರಂತರವಾಗಿ ಪ್ರಕೃತಿಯ ವೈಪರಿತ್ಯಗಳನ್ನು ಪರಿಗಣಿಸದೇ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು.
ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಡಿ. ಆರ್​. ಪಾಟೀಲ ಮಾತನಾಡಿ, ಇಂತಹ ಬಹುಶೃತ ವಿದ್ವಾಂಸರಾದ ಡಾ. ಪಾವಗಡ ಪ್ರಕಾಶರಾವ್​ ಅವರ ಪ್ರವಚನ ಕಾರ್ಯಕ್ರಮದ ಸದುಪಯೋಗವನ್ನು ಗದುಗಿನ ಸಮಸ್ತ ಸದ್ಭಕ್ತರು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಕುಮಾರವ್ಯಾಸ ಮಹಾಭಾರತ ಪ್ರವಚನ ಸಂಚಾಲನಾ ಸಮಿತಿಯ ಹಿರಿಯ ಸದಸ್ಯ ಡಾ. ಎಸ್​. ಬಿ. ಶೆಟ್ಟರ ಅಧ್ಯತೆ ವಹಿಸಿದ್ದರು. ಚಂದ್ರು ಬಾಳಿಹಳ್ಳಿಮಠ, ಕಲ್ಪನಾ ಪ್ರಕಾಶರಾವ್​ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವಿಭಾ ದೇಸಾಯಿ, ಪ್ರೋ. ಅನೀಲ ವೈದ್ಯ, ಡಾ. ದತ್ತಪ್ರಸನ್ನ ಪಾಟೀಲ, ಡಾ. ಪಾವಗಡ ಪ್ರಕಾಶರಾವ್​, ಮುಕುಂದ ಪೋತ್ನಿಸ್​, ಜೆ. ಕೆ. ಜಮಾದಾರ, ಡಾ. ವಿಜಯದತ್ತ ಮಂಗಸೂಳಿ, ಡಾ. ಅನಂತ ಶಿವಪುರ, ಶಶಿಧರ ಮೂರಶಿಳ್ಳೀನ, ಗುರುಮೂತಿರ್ ದೇಶಪಾಂಡೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net