

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಅಬ್ಬರ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ವಂಚನೆ ಎಸಗಿರುವ ಕೆಲ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಇದೀಗ ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲೂ ನಕಲಿ ಖಾತೆ ತೆರೆದು ವಂಚನೆ ಎಸಲಾಗುತ್ತಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಫೇಸ್ಬುಕ್ನಲ್ಲಿ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಪ್ರೊಫೈಲ್ ಫೋಟೋ ಜತೆಗೆ ಫೇಕ್ ಅಕೌಂಟ್ ತೆರೆದಿರುವ ಖತರ್ನಾಕ್ ಗ್ಯಾಂಗ್ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದೆ. ಪದ್ಮಿನಿ ಪ್ರಸಾದ್ ಹೆಸರಲ್ಲಿ ಮಹಿಳೆಯರ ಜತೆ ಚಾಟಿಂಗ್ ಸಹ ನಡೆಸುತ್ತಿದ್ದಾರೆ.
ಖಾಸಗಿ ಅಂಗಗಳ ವಿಡಿಯೋ ರೆಕಾರ್ಡ್ ಮಾಡಿ ಕಳಿಸುವಂತೆ ಖತರ್ನಾಕ್ ಗ್ಯಾಂಗ್ ಒತ್ತಾಯಿಸಿರುವುದು ಬಹಿರಂಗವಾಗಿದೆ. ಅಲ್ಲದೆ, ಖಾಸಗಿ ವಿಚಾರಗಳ ಕುರಿತು ಮಹಿಳೆಯರ ಜತೆ ಚಾಟಿಂಗ್ ನಡೆಸಿದ್ದು, ಭೇಟಿಯಾಗುವ ಸ್ಥಳದ ಬಗ್ಗೆ ಮಾಹಿತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನಗಳನ್ನು ಗ್ಯಾಂಗ್ ಮಾಡಿದೆ.
ಮಹಿಳೆಯರೊಂದಿಗೆ ನಡೆಸಿರುವ ಅಶ್ಲೀಲ ಚಾಟಿಂಗ್ ಸ್ಕ್ರೀನ್ ಶಾಟ್ ಇದೀಗ ಬಹಿರಂಗವಾಗಿದ್ದು, ಇದರಿಂದ ಎಚ್ಚೆತ್ತಿರುವ ಪ್ರದ್ಮಿನಿ ಪ್ರಸಾದ್ ಅವರು ಸೈಬರ್ ಕ್ರೈಮ್ಗೆ ದೂರು ಕೊಡಲು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್)