ಜಾನಪದ ಕ್ಷೇತ್ರಕ್ಕೆ ಡಾ.ಪಿ.ಆರ್.ತಿಪ್ಪೇಸ್ವಾಮಿ ಕೊಡುಗೆ ಅನನ್ಯ: ಪ್ರೊ.ಆರ್.ಸುನಂದಮ್ಮ ಬಣ್ಣನೆ

WhatsApp Image 2025-01-03 at 6.40.32 PM
Published on

ಮೈಸೂರು: ಮಾನಸಗಂಗೋತ್ರಿಯಲ್ಲಿರುವ ಜಾನಪದ ವಸ್ತು ಸಂಗ್ರಹಾಯಲಯ ನಿರ್ಮಾಣ ಸೇರಿದಂತೆ ಜಾನಪದ ಕ್ಷೇತ್ರಕ್ಕೆ ಡಾ.ಪಿ.ಆರ್.ತಿಪ್ಪೇಸ್ವಾಮಿ ಅವರ ಕೊಡುಗೆ ಅನನ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಸುನಂದಮ್ಮ ಬಣ್ಣಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಪಿ. ಆರ್. ತಿಪ್ಪೇಸ್ವಾಮಿ ಪೀಠದಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಿ.ಆರ್.ತಿಪ್ಪೇಸ್ವಾಮಿ ಅವರ ಸಾಂಸ್ಕೃತಿಕ ಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಾನಪದ ವಸ್ತುಸಂಗ್ರಹಾಲಯದ ಕ್ಯೂರೇಟರ್ ಆಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೇ ಜಾನಪದರು ಬಳಸುತ್ತಿದ್ದ ದೈನಂದಿನ ವಸ್ತುಗಳನ್ನು ಅತ್ಯಂತ ಶ್ರಮದಿಂದ ಸಂಗ್ರಹಿಸಿ ಅದನ್ನು ಒಂದೆಡೆ ಕಲೆ ಹಾಕುವ ಮೂಲಕ ಇತಿಹಾಸ ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ತಿಪ್ಪೇಸ್ವಾಮಿ ಅವರು ಕುಂಚದ ಜತೆಗೆ ಲೇಖನಿಯನ್ನೂ ಹಿಡಿದರು. ಲೇಖನಗಳ ವ್ಯಾಪ್ತಿ ಓದುಗರ ಪತ್ರ ಬರೆಯುವುದರಿಂದ ಹಿಡಿದು ಐತಿಹಾಸಿಕ ಭಿತ್ತಿಚಿತ್ರಗಳ ಹಾಗೂ ಕಲಾ ಸಂಗ್ರಹಾಲಯಗಳ ಪರಿಚಯ ಇತ್ಯಾದಿಯಾಗಿ ಕಲೆಯ ನಾನಾ ಮುಖಗಳ ಕುರಿತು ಬರೆಯುತ್ತಿದ್ದರು ಎಂದು ತಿಳಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ಎನ್.ಕೆ.ಲೋಕಾಕ್ಷಿ ಮಾತನಾಡಿ, ತಿಪ್ಪೇಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿದ್ದರು. ಸಂಶೋಧಕರಲ್ಲದೇ ವಸ್ತು ಸಂಗ್ರಹಾಲಯಗಳ ರೂವಾರಿ, ಜನಪದ ಕಲಾತಜ್ಞ, ಇವೆಲ್ಲಕ್ಕಿಂತ ಮಿಗಿಲಾಗಿ ಕಲಾವಿದ, ಕಲಾ ಲೇಖನಗಳ ಸಾಹಿತಿಯಾಗಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net