

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ.ನಿಂಗಯ್ಯ ಮೇ 31ರಂದು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳ ವತಿಯಿಂದ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ನಡೆಯಿತು. ಸಹಸ್ರಲಿಂಗೇಶ್ವರ ದೇವಳದಲ್ಲಿ ಈ ಹಿಂದೆ ಕಾರ್ಯನಿರ್ವಹಣಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಮಾಜಿ ಅಧ್ಯಕ್ಷ ಕರುಣಾಕರ, ಸದಸ್ಯರಾದ ಸುನಿಲ್,ಜಯಂತ್, ಅರ್ಚಕರು, ಮ್ಯಾನೇಜರ್ ವೆಂಕಟೇಶ್ ಇತರ ಸಿಬ್ಬಂದಿ ಇದ್ದರು.