ನಂದಾ ಪಾಟೀಲರರ ವಚನ ಸಂಗೀತದಲ್ಲಿ ಶರಣ ಸಂಸ್ಕೃತಿಯ ಮೌಲ್ಯ

1 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಾಯಕಿ ನಂದಾ ಪಾಟೀಲರು ಅವರ ವಚನ ಸಂಗೀತದ ನೆಲೆಗಳು ಶರಣ ಸಂಸ್ಕೃತಿಯ ಮೌಲ್ಯಗಳಿಗೆ ಹೆಸರಾಗಿವೆ. ಅವರು ಸಂಗೀತ ಕಲಾವಿದರಿಗೆ ಆದರ್ಶಪ್ರಾಯರು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಾಯಕಿ ಡಾ. ನಂದಾ ಪಾಟೀಲರ ಷಷ್ಟಿಪೂರ್ತಿ ಅಭಿನಂದನಾ ಸಮಾರಂಭ ಮತ್ತು ಲಿಂಗಾಯತ ಮಹಿಮರು' ಭಾಗ 2 ಮತ್ತು 3 ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಡಾ. ನಂದಾ ಪಾಟೀಲರಸಂಗೀತ ವಿಶಾರದೆ' ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ನಾಡಗೌಡ ಮಾತನಾಡಿ, ಸತಿ-ಪತಿಗಳೊಂದಾದ ಭಕ್ತಿ ಶಿವಗೆ ಅರ್ಪಿತ. ಡಾ. ಮಲ್ಲಿಕಾರ್ಜುನ ಪಾಟೀಲರ ಮಾರ್ಗದರ್ಶನ ಡಾ. ನಂದಾ ಪಾಟೀಲರ ಸಂಗೀತ ಜೀವನವನ್ನು ಅರಳಿಸಿದೆ ಎಂದರು.
ಕೋಡಿಮಠ ಮಹಾಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ನಂದಾ ಪಾಟೀಲರು ಸಂಗೀತ ಸಾದನೆಯಲ್ಲೇ ತಮ್ಮ ಜೀವನದ ಸಾಕ್ಷಾತ್ಕಾರ ಕಂಡವರು ಎಂದರು.
ಮಾಜಿ ಶಾಸಕ ಚಂದ್ರಕಾAತ ಬೆಲ್ಲದ, ಮಹಾದೇವ ಹೊರಟ್ಟಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಡಾ. ವಿ.ಎಸ್. ಸಾಧುನವರ ವೇದಿಕೆಯಲ್ಲಿದ್ದರು.
ಡಾ. ನಂದಾ ಪಾಟೀಲರ ಷಷ್ಟಬ್ದಿಪೂರ್ತಿ ಅಂಗವಾಗಿ ಸನ್ಮಾನಿಲಾಯಿತು.
ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಶ್ಚಾಪುರೆ, ಬಿ.ಡಿ. ಪಾಟೀಲ, ಡಿ.ಆರ್. ಪಾಟೀಲ, ರಾಜಶೇಖರ ಅಜ್ಜಂಪುರಶೆಟ್ಟರ, ಗುರುರಾಜ ಹುಣಸಿಮರದ, ಸಿ.ಎಸ್. ಪಾಟೀಲ, ವಿ.ಆರ್. ಕಿರೇಸೂರ, ಪಾರ್ವತಿ ಹಾಲಭಾವಿ, ರತ್ನಾ ಗಂಗಣ್ಣವರ, ಜಿ.ಸಿ. ತಲ್ಲೂರ, ಎನ್.ಆರ್. ಬಾಳಿಕಾಯಿ, ಇತರರಿದ್ದರು.
ಪ್ರೊ. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net