ಡಾ. ನಾಡಗೌಡರಿಗೆ ಯುಕೆ ವಿವಿ ಪದವಿ

IMG-20250312-WA0016.jpg
Published on

ಹುಬ್ಬಳ್ಳಿ: ಯುರೋಪಿಯನ್ ಒಕ್ಕೂಟದ (ಯುನೈಟೆಡ್ ಕಿಂಗ್ಡಂ) ಸೌಥ್ ವೆಲ್ಸ್ ವಿಶ್ವವಿದ್ಯಾಲಯದ ಮತ್ತೊಂದು ಪದವಿಯು ನಗರದ ಖ್ಯಾತ ವೈದ್ಯ ಡಾ. ವಿ.ಜಿ. ನಾಡಗೌಡ ಅವರ ಮುಡಿಗೇರಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು ಅಪರೂಪದ ವೈದ್ಯಕಿಯ ಅಧ್ಯಯನವೆಂದೇ ಹೇಳಲಾಗುವ ಅಂತಃಸ್ರಾವ ಶಾಸ್ತ್ರ (ಎಂಡೋಕ್ರಿನಾಲಾಜಿ) ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾದಲ್ಲಿ ಪ್ರಶಸ್ತಿ ಸಹಿತ (ಡಿಸ್ಟಿಂಗ್ಶನ್)ಉತ್ತೀರ್ಣರಾಗಿದ್ದಾರೆ.

ಈ ಅಧ್ಯಯನವನ್ನು ಎರಡು ವರ್ಷಗಳ ಕಾಲ ಆನ್ ಲೈನ್ ನಲ್ಲಿ ಪೂರೈಸಿದ ಇವರು ತಮ್ಮ ಅಧ್ಯಯನಾಸಕ್ತಿಗೆ ಮತ್ತಷ್ಟು ಇಂಬು ಕೊಟ್ಟಿದ್ದರು.

ಪದವಿ ಪ್ರದಾನ ಮಾಡುವ ಘಟಿಕೋತ್ಸವ ಸಮಾರಂಭವು 2026ರಲ್ಲಿ ಯುಕೆಯಲ್ಲಿ ನಡೆಯಲಿದೆ ಎಂದು ಸೌಥ್ ವೆಲ್ಸ್ ವಿವಿ ತಿಳಿಸಿದೆ.

ಡಾ. ವಿ.ಜಿ. ನಾಡಗೌಡರು ಹೃದಯ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ವೈದ್ಯಕಿಯಕ್ಕೆ ಸಂಬಂಧಿಸಿದಂತೆ ಈಗಾಗಲೇ 18 ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ಹಲವಾರು ವೈದ್ಯಕಿಯ ಮೌಲಿಕ ಪುಸ್ತಕಗಳನ್ನು ಬರೆದಿದ್ದಾರೆ.

2003ರಲ್ಲಿ ಎಪಿಐ-ಕೆ ಹಾಗೂ ಐಎಂಎದಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ಹಲವು ಸಂಸ್ಥೆಗಳಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಏಶಿಯನ್ ಬ್ಲೆಜರ್ ಗೌರವಕ್ಕೂ ಇವರು ಭಾಜನರಾಗಿರುವುದು ಸ್ಮರಣೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net