ಡಾ. ನಾಡಗೌಡ ಮರಳಿ ಕಾಂಗ್ರೆಸ್ ಸೇರ್ಪಡೆ

Dr Nad Gowda joins Congress again
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ಬಿಟ್ಟು ತೆರಳಿದ್ದ ಪ್ರಬಲ ನಾಯಕ ಡಾ. ಪದ್ಮಜೀತ ನಾಡಗೌಡ ಪಾಟೀಲ, ಅಶೋಕ ಅಂಗಡಿ, ಮಾಳು ಹಿಪ್ಪರಗಿ, ದೇವಲ ದೇಸಾಯಿ, ಸಂಗಪ್ಪ ಹಲ್ಲಿ ಸೇರಿದಂತೆ ಅನೇಕರು ಶನಿವಾರ ಬನಹಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ನೇತತ್ವದಲ್ಲಿ ಮರಳಿ ಪಕ್ಷಕ್ಕೆ ಸೇರ್ಪಡೆಗೊಂಡರು.
Published on

ರಬಕವಿ-ಬನಹಟ್ಟಿ: ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಬಕವಿಯ ಡಾ. ಪದ್ಮಜೀತ ನಾಡಗೌಡ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.

ಇದೀಗ ಲೋಕಸಭಾ ಚುನಾವಣೆ ಹಿನ್ನಲೆ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಬೆಂಬಲಕ್ಕೆ ನಿಂತು ಇಂದು ಶನಿವಾರ ಮುಖ್ಯಮಂತ್ರಿ ಸಿದ್ರಾಮಯ್ಯ ನೇತತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇವರ ಜೊತೆಗೆ ಡಾ. ಪದ್ಮಜೀತ ನಾಡಗೌಡ ಪಾಟೀಲರ ಬೆಂಬಲಿಗರಾದ ಶಂಕರ ಸೊರಗಾಂವಿ, ಮಾಳು ಹಿಪ್ಪರಗಿ, ಜಿನ್ನಪ್ಪ ಹೊಸೂರ, ಶ್ರೀಖರ ಪಿಸೆ, ಪ್ರಕಾಶ ನಡೋನಿ, ಸದಾಶಿವ ನಾಯಕ, ಸಂಜಯ ಅಮ್ಮಣಗಿಮಠ, ರಾಜು ದೇಸಾಯಿ, ರವೀಂದ್ರ ಬಾಡಗಿ ಸೇರಿದಂತೆ ಮಹಾಲಿಂಗಪೂರ-ತೇರದಾಳ-ರಬಕವಿ-ಬನಹಟ್ಟಿ ಪಟ್ಟಣ ಹಾಗು ಕ್ಷೇತ್ರದಲ್ಲಿನ ಎಲ್ಲ ಗ್ರಾಮಗಳ ನೂರಾರು ಮುಖಂಡರು, ಕಾರ್ಯಕರ್ತರು, ಸಾಮೂಹಿಕವಾಗಿ ಸೇರ್ಪಡೆಗೊಳ್ಳುವಲ್ಲಿ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net