

ಮಾಂಜರಿ: ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಅವರ 68ನೇ ಜನ್ಮ ದಿನದ ಅಂಗವಾಗಿ ಜು.22ರಂದು ಸಂಸ್ಥೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುರೇಶ ಚೌಗುಲೆ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜು.22ರಂದು ಬೆಳಗ್ಗೆ 9ಕ್ಕೆ ಆಶೀರ್ವಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸಲಾಗುವುದು.
ನಂತರ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಿಂದ 68 ಬಗೆಯ ಔಷಧ ಸಸಿ ನೆಡುವ ಕಾರ್ಯಕ್ರಮ, ರಕ್ತದಾನ ಶಿಬಿರ ಜರುಗುವುದು. ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಿಂದ ವರ್ಷಪೂರ್ತಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಪಂಚಕರ್ಮ ಕ್ರಿಯೆ ಮಾಡಲಾಗುತ್ತಿದೆ.
ಜತೆಗೆ ಉಚಿತ ಔಷಧ ವಿತರಣೆ ಹಾಗೂ ಶೇ.50ರಷ್ಟು ರಿಯಾಯಿತಿ ದರದಲ್ಲಿ ಶಸಚಿಕಿತ್ಸೆ ಮಾಡಲಾಗುವುದು. ಆದ್ದರಿಂದ ಜನರು ಶಿಬಿರದ ಲಾಭ ಪಡೆದುಕೊಳ್ಳಬೇಕು. ನಂತರ ಡಾ.ಎನ್.ಎ.ಮಗದುಮ್ಮ ಅವರ ಜನ್ಮದಿನ ಆಚರಿಸಲಾಗುವುದು. ಲಕ್ಷೇಶ್ವರದ ಚಂದನಾ ಶಾಲೆಯ ಅಧ್ಯಕ್ಷ ಟಿ.ಈಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಸನ್ನ ಸವಣೂರ, ಪ್ರಾಚಾರ್ಯ ವರ್ಷಾ ಥೋರಾತ, ಎನ್.ಎಸ್.ನಿಡಗುಂದೆ, ಸಿದ್ದಾರೂಢ ಪ್ರಭುನಟ್ಟಿ, ರಾಮಗೊಂಡ ಪಾಟೀಲ, ಯಾಕೂಬ್ ತಾಂಬಟ ಇತರರಿದ್ದರು.