ಕಾಯಕ-ದಾಸೋಹ ಪರಿಕಲ್ಪನೆ ಅನಾವರಣ

BASAVANNA
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಲಾಯಿತು. ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಸಾಂಸ್ಕೃತಿಕ ವಿಭಾಗದ ಮುಖಸ್ಥೆ ಡಾ.ಮುಮ್ತಾಜ್ ಬೇಗಂ, ಕನ್ನಡ ವಿಭಾಗದ ಮುಖಸ್ಥೆ ಪ್ರೊ.ಜಗದೇವಿ ಕಲಶೆಟ್ಟಿ ಇತರರಿದ್ದರು.
Published on

ಗಂಗಾವತಿ: ಅಸಾಮಾನತೆ ವಿರುದ್ಧ ವಚನದ ಮೂಲಕ ಸಮರ ಸಾರಿದ ಬಸವಣ್ಣ ಸಮ ಸಮಾಜದ ಶಿಲ್ಪಿ ಎಂದು ಎಸ್‌ಕೆಎನ್‌ಜಿ ಪದವಿ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖಸ್ಥೆ ಡಾ.ಮುಮ್ತಾಜ್ ಬೇಗಂ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿವಿಧ ವಿಭಾಗಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಕಾಯಕ ಮತ್ತು ದಾಸೋಹ ಪರಿಕಲ್ಪನೆ ಕಟ್ಟಿಕೊಟ್ಟರು. ಮಧ್ಯಕಾಲೀನ ಸಾಂಸ್ಕೃತಿಕ ಬದುಕು ನೀಡಿ, ಅನುಭವ ಮಂಟಪದ ಮೂಲಕ ಸಂಸತ್ತಿನ ಕಲ್ಪನೆ ನೀಡಿದ ಬಸವಣ್ಣ ಅವರ ಸಂದೇಶ ಸರ್ವಕಾಲಕ್ಕೂ ಅನ್ವಯವಾಗುತ್ತವೆ ಎಂದರು.

ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಶರಣರ ಸಂದೇಶಗಳು ಜಗತ್ತಿಗೆ ಬೆಳಕು ನೀಡುತ್ತಿದ್ದು, ಬಸವಣ್ಣ ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ನಾಯಕ. ಕೆಳವರ್ಗವದವರ ತಲ್ಲಣಗಳಿಗೆ ಧ್ವನಿಯಾಗಿ, ಸಮಾನತೆ ಸಾರಿದ ಮೊದಲ ವ್ಯಕ್ತಿ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಜಗದೇವಿ ಕಲಶೆಟ್ಟಿ, ಪ್ರಾಧ್ಯಾಪಕರಾದ ಡಾ.ಶೀಬಾರಾಣಿ, ಡಾ.ರವಿಕಿರಣ್, ಡಾ.ಶಿವರಾಜ ಗುರಿಕಾರ, ಮಾರುತಿ ಅಕ್ಕಿ, ಡಾ. ಇಮ್ಯಾನ್ಯುಯಲ್, ಡಾ.ಅನಿಲ ಎಡ್ವರ್ಡ್, ಶಿವಕುಮಾರ್, ಡಾ.ಸೆಲ್ವರಾಜ್, ಅಶ್ರ್ ಅಳ್ಳಳ್ಳಿ, ವ್ಯವಸ್ಥಾಪಕಿ ರಾಘಮ್ಮ, ಅತಿಥಿ ಉಪನ್ಯಾಸಕರಾದ ವೀರಭದ್ರಯ್ಯ ಸ್ವಾಮಿ, ಪಂಚಾಕ್ಷರಯ್ಯ ಹಿರೇಮಠ, ಗುಂಡೂರು ಪವನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net