ರಾಷ್ಟ್ರೀಯತೆಯಿಂದ ಕೂಡಿ ಬಾಳುವ ಸಂದೇಶ

Untitled design (9)
ಮಸ್ಕಿ ಭ್ರಮರಾಂಬ ದೇವಸ್ಥಾನದಲ್ಲಿ 54ನೇ ವರ್ಷದ ಮಹಾದೇವಿ ಪುರಾಣ ಮಂಗಲೋತ್ಸವದ ಕಾರ್ಯಕ್ರಮದಲ್ಲಿ ವಿರಾಪೂರ ಹಿರೇಮಠದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.
Published on

ಮಸ್ಕಿ: ಧರ್ಮ ಮತ್ತು ರಾಷ್ಟ್ರೀಯತೆ ಏಕತೆ ಇರುವುದು ಭಾರತದಲ್ಲಿ ಮಾತ್ರ. ಭಾರತಕ್ಕೆ ಅನೇಕ ಸಂಕಷ್ಟಗಳು ಬಂದಾಗ ಧರ್ಮ ದೇಶವನ್ನು ಎತ್ತಿ ಹಿಡಿದಿದೆ ಎಂದು ವೀರಾಪೂರ ಹಿರೇಮಠದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ 54ನೇ ವರ್ಷದ ಮಹಾದೇವಿ ಪುರಾಣ ಮಂಗಲೋತ್ಸವದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮ ಮತ್ತು ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಬೆರೆತು ಕೊಂಡಿವೆ. ಧರ್ಮ ಉತ್ತಮ ಮಾರ್ಗದಲ್ಲಿ ಬದಕುವುದನ್ನು ಕಲಿಸಿದರೆ, ರಾಷ್ಟ್ರೀಯತೆ ಕೂಡಿ ಬಾಳುವುದನ್ನು ಕಲಿಸುತ್ತದೆ ಎಂದರು.

ಆದಿಶಕ್ತಿ ಭ್ರಮರಾಂಬೆಯ ಕೈಯಲ್ಲಿ ಅಸ್ತ್ರ ಮತ್ತು ಶಸ್ತ್ರಗಳಿವೆ. ಅಸ್ತವನ್ನು ಮತ್ತು ಶಸ್ತ್ರವನ್ನು ಬಳಸುವ ವಿಧಾನ ಬೇರೆ ಬೇರೆ ಆಗಿದ್ದು ಯಾವುದನ್ನು ಯಾವಾಗ ಬಳಸಬೇಕು ಎಂಬುದನ್ನು ಅರಿತಿರಬೇಕು ಎಂದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಧುಮತಿ ದೇಶಪಾಂಡೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net