ಅತ್ಯಧಿಕ ಮತಗಳಿಂದ ಡಾ.ಮಂತರ್‌ಗೌಡ ಗೆಲುವು

7adarshkdga3
Published on

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಮಂತರ್ ಗೌಡ ಪರ ನಗರದ ಪ್ರಮುಖ ಬಡಾವಣೆಗಳಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಮತಯಾಚನೆ ಸಂದರ್ಭ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಅಭಿವೃದ್ಧಿಯ ಚಿಂತನೆಯೊಂದಿಗೆ ಕಣಕ್ಕಿಳಿದಿರುವ ಉತ್ಸಾಹಿ ಯುವ ರಾಜಕಾರಣಿ ಮಂತರ್‌ರವರ ಪರ ಯುವ ಸಮೂಹ ಒಲವು ತೋರಿದೆ. ಈ ಹಿಂದೆ ಕಂಡರಿಯದಷ್ಟು ಜನಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ ದೊರೆಯುತ್ತಿದೆ. ಆದ್ದರಿಂದ ಮಂತರ್ ಗೆಲವು ಖಚಿತವೆಂದರು.


ನಗರ ಕಾಂಗ್ರೆಸ್ ಉಸ್ತುವಾರಿಯ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಯೋಜನೆಗಳ ಕುರಿತು ಮತದಾರರಿಗೆ ವಿವರಿಸಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.


ನಗರ ಉಸ್ತುವಾರಿ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಉಪಾಧ್ಯಕ್ಷ ಮಹಮ್ಮದ್ ಯಾಕುಬ್, ಡಿಸಿಸಿ ಸದಸ್ಯ ಜಫ್ರುಲ್ಲಾ ಸೇರಿದಂತೆ ಅನೇಕರು ಮನೆಯಾಚನೆ ಸಂದರ್ಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net