

ಮಡಿಕೇರಿ: ಸರ್ಕಾರಿ ಪದವಿಪೂರ್ವ ಕಾಲೇಜುನಲ್ಲಿ ಹಳೆಯ ವಿಧ್ಯಾರ್ಥಿಗಳ ಪರಿಶ್ರಮದ ಫಲವಾಗಿ ಇಪ್ಪತೈದು ವರ್ಪಗಳ ಹಿಂದೆ ನಿರ್ಮಾಣವಾಗಿ ಇಂದು ದುಸ್ಥಿತಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣದ ಸ್ಥಿತಿಗತಿಯನ್ನು ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಶಾಸಕ ಮಂತರ್ ಗೌಡ ಅವರು ಪರಿಶೀಲಿಸಿದರು.
ಇಪ್ಪತೈದು ವರ್ಷದ ಹಿಂದೆ ಕೊಡಗು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜಮ್ಮಡ ಕರುಂಬಯ್ಯ ಮತ್ತು ಅವರ ಅನೇಕ ಒಡನಾಡಿಗಳು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಸಂಘವನ್ನು ಸ್ಥಾಪಿಸಿದರು. ಆ ನಂತರ ಅಂದಿನ ಕಾಲದಲ್ಲಿಯೇ ೨ ಕೋಟಿ ರೂ ವೆಚ್ಚದಲ್ಲಿ ಬೃಹತ್ ಸಭಾಂಗಣವನ್ನು ನಿರ್ಮಾಣ ಮಾಡಿರುವುದು ನಮ್ಮ ಹಿರಿಯರ ಘನತೆಯನ್ನು ಎತ್ತಿಹಿಡಿದಿದೆ. ಅವರ ಅಸ್ಮಿತೆಯ ಪ್ರತೀಕವಾಗಿರುವ ಸಭಾಂಗಣವನ್ನು ಸುಸ್ಥಿತಿಯಲ್ಲಿಡುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ ಡಾ.ಮಂತರ್ ಗೌಡರವರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅಭಿವೃದ್ಧಿ ಪಡಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭಾಂಗಣದ ಶಂಕುಸ್ಥಾಪನೆಗೆ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಅಲಂ ಖಾನ್ ಹಾಗೂ ಸಭಾಂಗಣದ ಉದ್ಘಾಟಾನೆಗೆ ಅಂದಿನ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಯವರು ಆಗಮಿಸಿದ್ದ ಬಗ್ಗೆ ಮಾಹಿತಿ ಪಡೆದ ಶಾಸಕರು ಹಳೆಯ ವಿಧ್ಯಾರ್ಥಿ ಸಂಘದ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪ್ರಭು ರೈ, ಪ್ರಮುಖರಾದ ಪ್ರಕಾಶ್ ಆಚಾರ್ಯ, ರವಿ ಗೌಡ, ನಗರ ಸಭಾ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಪ್ರಮುಖರಾದ ವಿ.ಜಿ.ಮೋಹನ್, ಚಂದ್ರಶೇಖರ್, ಕೊತ್ತೊಳಿ ಕವನ್, ವಸಂತ್ ಭಟ್, ನಗರ ಸಭೆಯ ಇಂಜಿನಿಯರ್‌ಗಳು ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.