ರಾಜಕೀಯ ಹೇಳಿಕೆಗೂ ಮಠಕ್ಕೂ ಸಂಬ೦ಧವಿಲ್ಲ

swamiji-dp1-1684156319
Published on

ಧಾರವಾಡ: ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ನೀಡಿರುವ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬAಧವಿಲ್ಲ ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡ ಮುರುಘಾಮಠ ಸರ್ವಸಮಾಜದ ಏಳಿಗೆಗಾಗಿ ಸರ್ವ ಸಮÁಜದ ಭಕ್ತರು ನಡೆದುಕೊಳ್ಳುವ ಪವಿತ್ರ ಕ್ಷೇತ್ರ. ಮಠ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜಕೀಯ ವಿಷಯಗಳಲ್ಲಿ ಭಾಗವಹಿಸುವುದಿಲ್ಲ. ಯಾವದೇ ಅಭ್ಯರ್ಥಿಯ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀಮÁðನ. ಇದಕ್ಕೂ ಮಠ- ಮಾನ್ಯಗಳಿಗೂ ಯÁವದೇ ಸಂಬAಧವಿಲ್ಲ. ದಿಂಗಾಲೇಶ್ವರ ಶ್ರೀಗಳು ಮೂರುಸಾವಿರ ಮಠದಲ್ಲಿ ಸ್ವಾಮಿಗಳ ಸಭೆ ಇದೆ ಎಂದು ಕರೆದಿದ್ದರು. ಸಭೆಯಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ್ ಜೋಶಿಯವರ ಬದಲಾವಣೆ ವಿಚಾರ ದಿಂಗಾಲೇಶ್ವರ ಶ್ರೀಗಳ ವೈಯಕ್ತಿಕ ಹೇಳಿಕೆ ಎಂದು ಡಾ. ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net