

ರಾಯಚೂರು ಲೋಹಿಯವಾದಿಗಳಾಗಿದ್ದ ನಾಗಪ್ಪನವರು ಕೇವಲ ಶಿಕ್ಷಣ, ವಕಾಲತ್ತು ಮಾತ್ರವಲ್ಲದೇ ಸ್ವಾತಂತ್ರ‍್ಯ ಚಳುವಳಿಯಲ್ಲಿಯೂ ಹೆಸರು ಮಾಡಿ ಮಹನೀಯರಾಗಿದ್ದಾರೆ. ಅವರ ಪುಣ್ಯ ಸ್ಮರಣೆಯನ್ನು ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಮಾಡುತ್ತಿರುವ ನಾಗಪ್ಪ ಪ್ರತಿಷ್ಠಾನದ ಕಾರ್ಯ ಪ್ರಶಂಸನೀಯವೆAದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಭಾನುವಾರ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರತಿಷ್ಠಾನದ ೨೧ನೇ ವಾರ್ಷಿಕೋತ್ಸವದ ಅಂಗವಾಗಿ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಹಾಗೂ ಲಿಂ.ಡಾ. ಎಂ.ನಾಗಪ್ಪ ವಕೀಲರ ೧೪ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಎಂ ನಾಗಪ್ಪ ವಕೀಲರು ಕಾನೂನು, ಸಂಸದೀಯ ಹಾಗೂ ಸಮಾಜವಾದಿಯ ಜ್ಞಾನವನ್ನು ಹೊಂದಿದ ಬಲವಂತರಾಗಿದ್ದು,
ಅವರನ್ನು ಜಿಲ್ಲೆ ಮಾತ್ರವಲ್ಲದೇ ಇಡೀ ನಾಡು ಸ್ಮರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಲೋಹಿಯವಾದಿಗಳಾಗಿದ್ದ ನಾಗಪ್ಪನವರು ಕೇವಲ ಶಿಕ್ಷಣ, ವಕಾಲತ್ತು ಮಾತ್ರವಲ್ಲದೇ ಸ್ವಾತಂತ್ರ‍್ಯ ಚಳುವಳಿಯಲ್ಲಿಯೂ ಹೆಸರು ಮಾಡಿ ಮಹನೀಯರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಅನ್ಯನ್ಯ ಸೇವೆ ಸಲ್ಲಿಸಿ, ಬಡಜನರ ಸಮಸ್ಯೆಗಳನ್ನು ಪರಿಹರಿಸಲು ಹಮಾಲರ ಸಂಘ, ಪೌರ ಕಾರ್ಮಿಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಅವರ ಕಾರ್ಯ ಅತ್ಯಂತ ಸ್ಮರಣೀಯವಾಗಿರುತ್ತದೆ ಎಂದರು.
ನಾಗಪ್ಪ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಶಿವಪೂಜೆಯಲ್ಲಿಯೂ ನಿಷ್ಟೆಯಿದ್ದ ನಾಗಪನವರ ನಿಷ್ಠೆಯಿಂದಲೇ ಶರಣ ಸಾಹಿತ್ಯ ಸಮ್ಮೇಳನದ ನೇತೃತ್ವವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸೋಮವಾರಪೇಟೆ ಹಿರೆಮಠದ ಅಭಿನವವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಯಚೂರಿಗೆ ಉತ್ತಮ ಕೊಡುಗೆ ಕೊಟ್ಟವರಲ್ಲಿ ನಾಗಪ್ಪನವರು ಮೊದಲಿಗರಾಗಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದರು. ಬದುಕಿದಷ್ಟು ದಿನ ಒಳ್ಳೆಯದನ್ನು ಮಾಡಿ ಬದುಕಿದ ನಾಗಪ್ಪನವರು ಜಿಲ್ಲೆ ಮಾತ್ರವಲ್ಲದೇ ಇಡೀ ನಾಡಿನಲ್ಲಿ ಉತ್ತಮ ಹೆಸರನ್ನು ಗಳಿಸಿದ್ದರು ಎಂದು ತಿಳಿಸಿದರು.
ನಂತರ ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಕೆ.ಎ.ಪಂಚಾಕ್ಷರಯ್ಯ ಅವರಿಗೆ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸಪ್ಪ ತಿಪ್ಪಾರೆಡ್ಡಿ, ಉಪಾಧ್ಯಕ್ಷ ಮಸ್ಕಿ ನಾಗರಾಜ, ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಕೋಶಾಧ್ಯಕ್ಷ ಮಲ್ಲಿಕಾರ್ಜುನ ಸೇರಿ ಅನೇಕರು ಇದ್ದರು.