ಮರೆಯಲಾಗದ ಸಾಹಿತ್ಯ ದಾರ್ಶನಿಕ ಡಾ. ಕಲಬುರ್ಗಿ: ಗೊ.ರು. ಚನ್ನಬಸಪ್ಪ

28 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಲಬುರ್ಗಿ ಅವರಂಥ ಸಾಹಿತ್ಯ ದಾರ್ಶನಿಕರನ್ನು ಮರೆಯಲಾಗದು. ಆ ಅಪ್ರತಿಮ ಚೇತನವನ್ನು ಸ್ಮರಿಸಿಕೊಳ್ಳುವುದು ಅನಿರ್ವಚನೀಯ ಭಾವನಾತ್ಮಕ ಅನುಭವ. ಅವರ ಸಂಶೋಧನೆ, ಚಿಂತನೆಯಲ್ಲಿ ಇದ್ದ ಮಾನವೀಯ ಅಂತಃಕರಣದಿ0ದ ಶ್ರೇಷ್ಠ ಸಂಶೋಧಕರಾಗಿದ್ದರು ಎಂದು ನಾಡೋಜ ಗೊ.ರು. ಚನ್ನಬಸಪ್ಪ ಹೇಳಿದರು.

ಡಾ. ಎಂ.ಎ0. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಡಾ. ಎಂ.ಎ0. ಕಲಬುರ್ಗಿ ಅವರ 86ನೇ ಜನ್ಮದಿನದ ಅಂಗವಾಗಿ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕಲಬುರ್ಗಿ ಅವರಲ್ಲಿ ಮೇಲು- ಕೀಳರಿಮೆ ಇರಲಿಲ್ಲ. ಅವರದು ಸ್ವಹಿತ ಮೀರಿದ ಸೇವೆಯಾಗಿತ್ತು. ಹಲವು ಗುಣಗಳ ಗಣಿಯಾಗಿದ್ದ ಅವರದು ಸಮಗ್ರ ವ್ಯಕ್ತಿತ್ವವಾಗಿತ್ತು. ಸಭ್ಯತೆ, ಸೌಜನ್ಯತೆ, ಪ್ರಾಮಾಣಿಕತೆ, ವಿನಮ್ರತೆ, ಮನೋವೈಶಾಲ್ಯಗಳಂಥ ಜೀವನ ಮೌಲ್ಯಗಳಿಗೆ ಬೆಲೆ ತಂದು ಕೊಟ್ಟರು. ಅವರ ದೃಷ್ಟಿಯಲ್ಲಿ ಮೌಲ್ಯವು ಹೊರಗಣ್ಣಿನ ಹೊಳಪಾಗಿರಲಿಲ್ಲ; ಒಳಗಣ್ಣಿನ ಬೆಳಕಾಗಿತ್ತು. ಅವರಲ್ಲಿ ದಾಕ್ಷಿಣ್ಯಪರತೆಗೆ ಇಂಬು ಇರಲಿಲ್ಲ. ಶರಣರ ಮಾತಿನಲ್ಲಿ ಹೇಳುವುದಾದರೆ ಅವರು ನ್ಯಾಯ ನಿಷ್ಠುರರಾಗಿದ್ದರು ಎಂದರು.

ಮೈಸೂರಿನ ಡಾ. ಎನ್.ಎಸ್. ತಾರಾನಾಥ ಅವರಿಗೆ (ಅನುಪಸ್ಥಿತಿಯಲ್ಲಿ) `ಡಾ. ಎಂ.ಎ0. ಕಲಬುರ್ಗಿ ಸಂಶೋಧನ ಪ್ರಶಸ್ತಿ' ಮತ್ತು ವಿಜಯಪುರದ ಡಾ. ಶರಣಬಸಪ್ಪ ಎಸ್. ಮೇಡೇದಾರ ಅವರಿಗೆ `ಡಾ. ಎಂ.ಎ0. ಕಲಬುರ್ಗಿ ವಚನ ಸಂಗೀತ' ಪ್ರಶಸ್ತಿಯನ್ನು ನಾಡೋಜ ಗೊ.ರು. ಚನ್ನಬಸಪ್ಪ ಪ್ರದಾನ ಮಾಡಿದರು.

ಪ್ರತಿಷ್ಠಾನ ಅಧ್ಯಕ್ಷ ಡಾ. ವೀರಣ್ಣ ರಾಜೂರ ಸಂಪಾದಕತ್ವದಲ್ಲಿ ಹೊರತಂದ `ಕನ್ನಡ ಸಂಶೋಧನ ಮಾರ್ಗ' ಸಂಪುಟ- 1 ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಉಮಾದೇವಿ ಕಲಬುರ್ಗಿ, ಸದಸ್ಯರಾದ ಡಾ. ಜಿ.ಎಂ. ಹೆಗಡೆ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಹನುಮಾಕ್ಷಿ ಗೋಗಿ, ಡಾ. ಸಿದ್ದನಗೌಡ ಪಾಟೀಲ, ಚಂದ್ರಶೇಖರ ವಸ್ತçದ, ಶ್ರೀವಿಜಯ ಕಲಬುರ್ಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net