ಡಾ.ಪ್ರಭಾಕರ ಕೋರೆ ಜನ್ಮದಿನ; ರಕ್ತದಾನ, ಆರೋಗ್ಯ ಶಿಬಿರಕ್ಕೆ ಜನಸಾಗರ

IMG-20230801-WA0018.jpg
Published on


ಬೆಳಳಗಾವಿ: ಅಕ್ಷರ ಸಂತ,  ಅಭಿವೃದ್ಧಿಯ ಹರಿಕಾರ ನಗರದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ೭೬ನೇ ಜನ್ಮದಿನದ ಅಂಗವಾಗಿ ಮಂಗಳವಾರ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಬೆಳಗ್ಗೆ ೧೦ ರಿಂದ ಉಚಿತ ಆರೋಗ್ಯ ತಪಾಸಣೆಯ ಕಾರ್ಯ ನಡೆಯುತ್ತಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್ಇ ಶಾಲಾ ಆವರಣದಲ್ಲಿ ಬೆಳಗ್ಗೆ ೯ ರಿಂದ  ಬೃಹತ್ತ ರಕ್ತದಾನ ಶಿಬಿರ ಆರಂಭವಾಗಿದೆ.
ಶಿಬಿರದಲ್ಲಿ ಉಚಿತ ರಕ್ತದಲ್ಲಿನ ಸಕ್ಕರೆ(ಬ್ಲಡ್ ಶುಗರ್) ಅಂಶ, ಹೆಪಟಟೈಟಿಸ್ ಬಿ, ಲಿವರ್ ಫೈಬ್ರೊಸ್ಕ್ಯಾನ್ , ಇಸಿಜಿ ಹಾಗೂ ಸಾಮಾನ್ಯ ಒಪಿಡಿ ಸಮಾಲೋಚನೆ  ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net