ಡಾ. ಕೋರೆ ಜನ್ಮದಿನಕ್ಕೆ ಅಂಕಲಿ ಸಜ್ಜು

Kore
Published on

ಬೆಳಗಾವಿ: ಆರೋಗ್ಯ, ಶಿಕ್ಷಣ, ಕೃಷಿ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸ ಕ್ರಾಂತಿ ಮಾಡಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮದಿನದ ಅದ್ದೂರಿ ಆಚರಣೆಗೆ ಅವರ ಹುಟ್ಟೂರು ಅಂಕಲಿ ಗ್ರಾಮ ಸಜ್ಜಾಗಿದೆ.
ಗ್ರಾಮೀಣ ಪ್ರದೇಶದ ರೈತರು, ದೀನ-ದಲಿತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವು ದಶಕಗಳಿಂದ ಶ್ರಮಿಸುತ್ತಿರುವ ಡಾ. ಪ್ರಭಾಕರ ಕೋರೆ ಅವರು ಆಗಸ್ಟ್ 1ಕ್ಕೆ 76ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸಪ್ತರ್ಷಿಗಳು ಕಟ್ಟಿರುವ ಕೆಎಲ್‌ಇ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ತೆಗೆದು ಕೊಂಡು ಹೋಗಿರುವ ಡಾ. ಪ್ರಭಾಕರ ಕೋರೆ ಅವರು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕೆಎಲ್‌ಇ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಸಂಶೋಧನಾ ಕೇಂದ್ರಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ. ಶಿಕ್ಷಣ, ಕಷಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿರುವ ಡಾ. ಕೋರೆಯವರ ಸಾಧನೆಗೆ ಸಾರ್ಥಕ ಗೌರವ ಸಲ್ಲಿಸಲು ವಿವಿಧ ಮಠಾಧೀಶರು, ಸಚಿವರು, ಸಂಸದರು, ಶಾಸಕರು, ಸಮಾಜದ ಗಣ್ಯರು, ರಾಜಕಾರಣಿಗಳು, ಅಭಿಮಾನಿಗಳು ಸಜ್ಜಾಗಿದ್ದಾರೆ.

ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮ ದಿನದ ಅಂಗವಾಗಿ ಜು. 27ರಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಆ. 1ರವರೆಗೆ ನಿಬಂಧ, ಭಾಷಣ, ಚರ್ಚಾಕೂಟ ಸ್ಪರ್ಧೆಗಳು, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ರೈತಪರ ಹಾಗೂ ಸಮಾಜೋಪಯೋಗಿ ಕಾರ್ಯಕ್ರಮಗಳು ಜರುಗುತ್ತಿವೆ. ನೆಚ್ಚಿನ ನಾಯಕನ ಜನ್ಮದಿನದ ನಿಮಿತ್ತ ಏರ್ಪಾಟಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಗಳು

29 ಹಾಗೂ 30ರಂದು ಕೆಎಲ್‌ಇ ಅಂಗಸಂಸ್ಥೆಗಳ ವಿದ್ಯಾರ್ಥಿ ಗಳಿಗಾಗಿ ನಿಬಂಧ, ಭಾಷಣ, ಆಶುಭಾಷಣ, ಚರ್ಚಾಕೂಟ.
31ರಂದು ಅಂಕಲಿಯ ಶಿವಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆಯ ಮಹತ್ವ ಕುರಿತು ಉಪನ್ಯಾಸ.
1ರಂದು ಅಂಕಲಿಯ ಶಿವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net