ಡಾ. ಕವಿತಾ ಮಿಶ್ರಾಗೆ `ಕೃಷಿ ಸೇವಾ ಗೌರವ' ಪ್ರಶಸ್ತಿ

20 Dwd 2 Dr. Kavita Mishra
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಬೆಲ್ಲದ ಕೃಷಿ ಮತ್ತು ಶಿಕ್ಷಣ ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ `ಕೃಷಿ ಸೇವಾ ಗೌರವ ಪ್ರಶಸ್ತಿ'ಗೆ ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದ ಡಾ. ಕವಿತಾ ಮಿಶ್ರಾ ಭಾಜನರಾಗಿದ್ದಾರೆ. ಮಾ. 23ರಂದು ಕವಿವ ಸಂಘದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಡಾ. ಕವಿತಾ ಮಿಶ್ರಾ ಧಾರವಾಡದ ಅಗ್ನಿಹೋತ್ರಿ ಮನೆತನದವರು. ರಾಯಚೂರ ಜಿಲ್ಲೆಯ ಕವಿತಾಳ ಗ್ರಾಮದ ಉಮಾಶಂಕರ ಮಿಶ್ರಾ ಅವರನ್ನು ವಿವಾಹವಾಗಿ, ಕೃಷಿ ತಜ್ಞರಾಗಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಇಂಜಿನಿಯರಿ0ಗ್ ನಂತರ ಮನೋವಿಜ್ಞಾನ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಕೆಲ ವರ್ಷ ನೌಕರಿ ಮಾಡಿ ಕೃಷಿಯತ್ತ ಉತ್ಸುಕರಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಂಜರು ಭೂಮಿಯನ್ನು ಹಸಿರು ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ನೀರಾವರಿ ಮೂಲಕ ಹಲವು ಬಗೆಯ ಫಸಲು ಬೆಳೆಯುತ್ತಿದ್ದಾರೆ. ಜತೆಗೆ ಸಾವಯವ ಗೊಬ್ಬರ ತಯಾರಿಕೆಯೊಂದಿಗೆ ಸಾವಯವ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ಕೃಷಿ ಕ್ಷೇತ್ರದ ಜೀವಮಾನ ಸಾಧನೆಗಾಗಿ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net