

ಬೆಂಗಳೂರು: ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ನಾಡೋಜ ಡಾ.ಕಮಲಾ ಹಂಪನಾ ಅವರು ಆಧುನಿಕ ಮಹಿಳೆಯರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಸಂಸತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ತಿಳಿಸಿದ್ದಾರೆ.
ಕರ್ನಾಟಕ ಲೇಖಕಿಯರ ಸಂ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆಯ ವತಿಯಿಂದ ಭಾನುವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ 'ಡಾ.ಕಮಲಾ ಹಂಪನಾ ದತ್ತಿ ಉಪನ್ಯಾಸ' ಹಾಗೂ "ಪ್ರಶಸ್ತಿ ಪ್ರದಾನ' ಕಾರ್ಯಕ್ರಮದಲ್ಲಿ ಡಾ. ಕಮಲಾ ಹಂಪನಾ ಅವರ 'ಬದುಕು-ಬರಹ' ಕುರಿತು ಉಪನ್ಯಾಸ ನೀಡಿದರು.
ಡಾ.ಕಮಲಾ ಹಂಪನಾ ಅವರ ಮಹಿಳೆಯರ ಬಗೆಗಿನ ಬರಹಗಳು, ರಾಷ್ಟ್ರಕೂಟ, ಗಂಗರ ಕಾಲದ ಮಹಿಳೆಯರ ಬಗೆಗೆ ಸಂಶೋಧನಾ ಲೇಖನಗಳು, ಲೇಖಕಿಯರ ವ್ಯಕ್ತಿಚಿತ್ರಗಳು, ಲೇಖಕಿಯರ ಕೃತಿಗಳಿಗೆ ಬರೆದ ಮುನ್ನುಡಿಗಳು ಸೇರಿದಂತೆ ಅನೇಕ ಬರಹಗಳು ಮಹಿಳಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ, ಕರ್ನಾಟಕ ಲೇಖಕಿಯರ ಸಂದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ, ಎಚ್.ಎನ್.ರಾಜಶ್ರೀ , ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ ಮತ್ತಿತರರಿದ್ದರು.
ಅನುವಾದಕ ಮಾಹೆರ್ ಮನ್ಸೂರ್ ಮತ್ತು ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಅವರಿಗೆ ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ನೀಡುವ 2023ನೇ ಸಾಲಿನ ಕಮಲಾ ಹಂಪನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.