ಕೃಷಿ ಮಾಡುವ ಎಲ್ಲರೂ ಒಕ್ಕಲಿಗರೇ: ಗುಡಿಬಂಡೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ

3
ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯನ್ನು ಸಚಿವ ಡಾ.ಕೆ.ಸುಧಾಕರ್​ ಉದ್ಘಾಟಿಸಿದರು. ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ವಿಧಾನ ಪರಿಷತ್​ ಸದಸ್ಯ ಅನಿಲ್​ ಕುಮಾರ್​, ತಹಸೀಲ್ದಾರ್​ ಸಿಗ್ಬತ್​ ಉಲ್ಲಾ ಇತರರಿದ್ದರು.
Published on

ಗುಡಿಬಂಡೆ: ಭಾರತದಲ್ಲಿ ಸನಾತನ ಧರ್ಮ ಇನ್ನು ಜೀವಂತವಾಗಿದ್ದೂ, ಕೃಷಿ ಮಾಡುವ ಎಲ್ಲರೂ ಸಹ ಒಕ್ಕಲಿಗರೇ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಬೈರೆಗೌಡ ಒಕ್ಕಲಿಗರ ಸಂದಿಂದ ಭಾನುವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವನೇ ಒಕ್ಕಲಿಗ, ಕೆಂಪೇಗೌಡರ ನಿಸ್ವಾರ್ಥ ಸೇವೆಯಿಂದ ಇಂದೂ ಜನ ಅವರನ್ನು ನೆನೆಯುತ್ತಾರೆ. ಕೇವಲ ಒಕ್ಕಲಿಗ ಸಮುದಾಯಕ್ಕೆ ಸೇವೆ ಮಾಡದೆ ಸಮಾಜದ ಎಲ್ಲ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜತೆಗೆ 347 ದೊಡ್ಡ ಕೆರೆಗಳನ್ನು ನಿರ್ಮಾತೃವಾಗಿ ಜತೆಗೆ ಪರಿಸರ ಪ್ರೇಮಿಯಾಗಿದ್ದರು. ಸ್ವಾಭಿಮಾನವಿರುವ ಒಕ್ಕಲಿಗರಿಗೆ ಒಗ್ಗಟ್ಟಿನ ಅವಶ್ಯಕತೆ ಇದೆ. ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ನಿಗಮ ಸ್ಥಾಪಿಸಿ 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ವಿಶೇಷವಾಗಿ ಗುಡಿಬಂಡೆಯಲ್ಲಿ ಒಕ್ಕಲಿಗರ ಸಮುದಾಯ ಭವನಕ್ಕೆ 50 ಲಕ್ಷ ರೂ. ಅನುದಾನಕ್ಕೆ ಮುಖ್ಯಮಂತ್ರಿಗಳೊಂದಿಗೆ ಚಚಿರ್ಸಿ ಬಿಡುಗಡೆ ಮಾಡಿಸುವೆ ಎಂದು ಭರವಸೆ ನೀಡಿದರು.


ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಮಾತನಾಡಿ, ಹುಟ್ಟು ಉಚಿತ ಸಾವು ಖಚಿತ ಆದರೆ ನಾವು ಮಾಡಿರುವ ಕೆಲಸಗಳೇ ಸಮಾಜದಲ್ಲಿ ಉಳಿಯುತ್ತವೆ. ಕೆಂಪೇಗೌಡರು ಮಾಡಿರುವ ಕೆಲಸಗಳು ಇಂದಿಗೂ ಜೀವಂತವಾಗಿವೆ. ಹಲವು ರಾಜ್ಯಗಳ ಜನರ ಜೀವನಾಡಿ ಬೆಂಗಳೂರನ್ನು ಕಟ್ಟಿದ ಮಹಾನ್​ ವ್ಯಕ್ತಿ ಕೆಂಪೇಗೌಡ. ಬೆಂಗಳೂರಿನ ನಮ್ಮಮೆಟ್ರೋಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಸಚಿವ ಡಾ.ಕೆ.ಸುಧಾಕರ ಅವರು ಒತ್ತಾಯಿಸಬೇಕು.
ಬೆಂಗಳೂರು ನಗರವನ್ನು ಕಟ್ಟಿ ಬೆಳೆಸಿದ್ದು ಕೆಂಪೇಗೌಡರಾದರೆ, ಗುಡಿಬಂಡೆಯನ್ನು ಕಟ್ಟಿ ಬೆಳೆಸಿದ್ದು ಬೈರೈಗೌಡರು ಆದ್ದರಿಂದ ಗುಡಿಬಂಡೆ ಮುಖ್ಯದ್ವಾರಕ್ಕೆ ಬೈರೈಗೌಡ ಹೆಬ್ಬಾಗಿಲು ನಿಮಿರ್ಸಲು ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.


ಪಟ್ಟಣದ ಮುಖ್ಯಬಿದಿಯಲ್ಲಿ 20ಕ್ಕೂ ಹೆಚ್ಚು ಬೆಳ್ಳಿ ರಥದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಮೆರವಣಿಗೆ ನಡೆಸಲಾಯಿತು. ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ಪಿಯು ಸೇರಿ ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿರ್ಗಳಿಗೆ ಸನ್ಮಾನಿಸಲಾಯಿತು.


ವಿಧಾನ ಪರಿಷತ್​ ಸದಸ್ಯ ಅನಿಲ್​ ಕುಮಾರ್​, ತಹಸೀಲ್ದಾರ್​ ಸಿಗ್ಬತ್​ ಉಲ್ಲಾ, ಇಒ ರವೀಂದ್ರ, ಪಟ್ಟಣ ಪಂಚಾಯಿತಿ ಉಪಾಧ್ಯ ಅನಿಲ್​ ಕುಮಾರ್​, ರಾಜ್ಯ ಒಕ್ಕಲಿಗ ಸಂದ ಪ್ರಧಾನ ಕಾರ್ಯದಶಿರ್ ಟಿ.ಕೋನಪ್ಪರೆಡ್ಡಿ, ನಿರ್ದೇಕ ಯಲುವಳ್ಳಿ ಎಂ.ರಮೇಶ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಮಂಜುನಾಥ್​, ನೌಕರರ ಸಂದ ಅಧ್ಯ ಕೆ.ವಿ.ನಾರಾಯಣಸ್ವಾಮಿ, ಕಸಾಪ ತಾಲೂಕು ಅಧ್ಯ ಸುಬ್ಬರಾಯಪ್ಪ, ಒಕ್ಕಲಿಗ ಸಂದ ತಾಲೂಕು ಅಧ್ಯ ಮಂಜುನಾಥ್​, ಮುಖಂಡರಾದ ಶಿವಣ್ಣ, ಬೈರಪ್ಪ, ಪಾವಜೇನಹಳ್ಳಿ ನಾಗರಾಜ್​, ವೇಣು, ಆದಿರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net