

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಜೈನ ಅಧ್ಯಯನ ಪೀಠದ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಿ, ಕ್ರಿಯಾಶೀಲಗೊಳಿಸಲು ಹಿರಿಯ ಕನ್ನಡ ಪ್ರಾಧ್ಯಪಕ ಹಾಗೂ ಜೈನ ಧರ್ಮದ ವಿದ್ವಾಂಸ ಡಾ. ಜಿನದತ್ತ ಹಡಗಲಿ ಅವರನ್ನು ಸಂಯೋಜಕರನ್ನಾಗಿ ನೇಮಿಸಿ ಕವಿವಿ ಕುಲಪತಿ ಆದೇಶಿಸಿದ್ದು, ಗುರುವಾರ ಅಧಿಕಾರ ವಹಿಸಿಕೊಂಡರು.
33 ವರ್ಷಕ್ಕೂ ಹೆಚ್ಚು ಅವಧಿಗೆ ಕನ್ನಡ ಪ್ರಾಧ್ಯಾಪಕ, ಸಂಶೋಧಕ, ಸಂಶೋಧನ ಮಾರ್ಗದರ್ಶಕರಾಗಿ ಅಧ್ಯಯನ ಮತ್ತು ಬೋಧನೆಯಲ್ಲಿ ಅನುಭವ, ಶೈಕ್ಷಣಿಕ ಕಳಕಳಿ ಹೊಂದಿರುವ ಡಾ. ಜಿನದತ್ತ ಹಡಗಲಿ ಅವರನ್ನು ಸಂಯೋಜಕರಾಗಿ ನಿಯೋಜಿಸಲಾಗಿದೆ. ಅಧ್ಯಯನ ಪೀಠದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಲು ಕವಿವಿ ಅವಕಾಶ ಕಲ್ಪಿಸಿದೆ.
ನಿಕಟಪೂರ್ವ ಸಂಯೋಜಕ ಡಾ. ಮಲ್ಲಿಕಾರ್ಜುನ ಪಾಟೀಲ ಅವರು ಹಡಗಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.