

ಹುಬ್ಬಳ್ಳಿ: ನಗರದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯು ಡಾ. ಕ್ಯಾಥರಿನ್ ದಿನೇಶ ಅವರಿಗೆ ಅಂತಾರಾಷ್ಟ್ರೀಯ ಇಂಡೋ-ಲಂಕಾ ಸ್ನೇಹ ಪ್ರಶಸ್ತಿ ಲಭಿಸಿದ್ದು, ಇತ್ತೀಚೆಗೆ ಶ್ರೀಲಂಕಾದ ಕೊಲೊಂಬೋದಲ್ಲಿ ಪ್ರದಾನ ಮಾಡಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ 40ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಲಂಕಾದ ಬುದ್ಧ ಶಾಸನ ಧಾರ್ವಿುಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿಧುರ ವಿಕ್ರಮನಾಯಕೆ, ಏಷಿಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ಇಂಡಿಯಾದ ಮದನ್ಗೌಡ, ಐಸಿಎಫ್ಸಿ ಇಂಡಿಯಾ ಎಂಇಟಿ ಅಧ್ಯಕ್ಷ ಕೆ.ಪಿ. ಮಂಜುನಾಥ ಸಾಗರ, ಎಎಂಸಿಎ ಅಧ್ಯಕ್ಷ ಉಪುಲ್ ಜಯಕಾಂತ ಜಯಸಿಂಗೆ, ಇತರರು ಇದ್ದರು.