ಯುವಜನರಿಗೆ ಡಾ.ಹಂಸರಾಜ್ ಪ್ರೇರಣೆ: ಎಂ.ಎಚ್.ಅರವಿಂದ ಪೂಂಜ ಅಭಿಪ್ರಾಯ

Mul_young people
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿಯ ಮಣ್ಣಿನ ಮಗನಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮೂಲಕ ಬ್ರಿಟನ್ ಮಹಾರಾಜರಿಂದ ಅತ್ಯುನ್ನತ ಗೌರವ ಪಡೆದ ಡಾ.ಹಂಸರಾಜ್ ಶೆಟ್ಟಿ ಜಿ.ಎಂ. ಅವರು ಯುವ ಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ ಹೇಳಿದರು.

ಬ್ರಿಟನ್ ಮಹಾರಾಜ ಚಾಲ್ಸ್ ಅವರು ಪ್ರದಾನ ಮಾಡಿರುವ ಪ್ರತಿಷ್ಠಿತ ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪಾಯರ್ ಗೌರವ ಪಡೆದ ನಂತರ ಮೊದಲ ಬಾರಿಗೆ ಮೂಲ್ಕಿಗೆ ಆಗಮಿಸಿದ ಮೂಲ್ಕಿ ಕಾರ್ನಾಡಿನ ದಿ.ಗುಂಡಾಲು ಮಹಾಬಲ ಶೆಟ್ಟಿ ಎಂಬುವವರ ಪುತ್ರ ಡಾ.ಹಂಸರಾಜ್ ಶೆಟ್ಟಿ ಜಿ.ಎಂ. ಅವರನ್ನು ಪೂಂಜ ಟ್ರಸ್ಟಿನ ಮೂಲಕ ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭ ಡಾ.ಹಂಸರಾಜ್ ಶೆಟ್ಟಿ ಅವರ ತಾಯಿ ರತ್ನಾ ಜಿ.ಎಂ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಡಾ.ಹಂಸರಾಜ್ ಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ಕಷ್ಟದ ದಿನಗಳಲ್ಲಿ ಶಿಕ್ಷಣ ಪಡೆದು ಹೆತ್ತವರ, ಮೂಲ್ಕಿ ಹರಿ ಪೂಂಜ ಹಾಗೂ ಇತರ ಹಲವು ಗಣ್ಯರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಯಾವತ್ತೂ ಕಠಿಣ ಶ್ರಮ, ಪ್ರಾಮಾಣಿಕತೆ ಜೀವನದಲ್ಲಿ ಉನ್ನತಿ ತರಲು ಸಾಧ್ಯವಿದೆ ಎಂದು ಹೇಳಿದರು.

ಡಾ.ಹಂಸರಾಜ್ ಸಹೋದರ ಹರ್ಷರಾಜ್ ಶೆಟ್ಟಿ ಜಿ.ಎಂ., ಮುರಳೀಧರ ಭಂಡಾರಿ, ಸುನೀಲ್ ಆಳ್ವ, ವೈ.ಎನ್.ಸಾಲ್ಯಾನ್, ಶಶೀಂದ್ರ ಎಂ.ಸಾಲ್ಯಾನ್, ಎಂ.ಸರ್ವೋತ್ತಮ ಅಂಚನ್, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ, ಎಂ.ಎಚ್.ಅಬ್ದುಲ್ ರಜಾಕ್, ಸುರೇಶ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net