ಕರಾಮುವಿ ಕುಲಸಚಿವ(ಪರೀಕ್ಷಾಂಗ) ಆಗಿ ಡಾ.ಎಚ್.ವಿಶ್ವನಾಥ್ ನೇಮಕ

KSOU-14
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ(ಪರೀಕ್ಷಾಂಗ)ರಾಗಿ ಡಾ.ಎಚ್.ವಿಶ್ವನಾಥ್ ನೇಮಕಗೊಂಡಿದ್ದಾರೆ.


ಇವರು ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರು. ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಶಿಫಾರಸಿನ ಮೇರೆಗೆ ಇವರನ್ನು ರಾಜ್ಯಪಾಲರು ನಿಯೋಜಿಸಿದ್ದಾರೆ.


ಸೋಮವಾರದಿಂದ ಮುಂದಿನ ಆದೇಶದವರೆಗೆ ಇವರು ಕುಲಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತು ರಾಜ್ಯಪಾಲರ ಕಾರ್ಯದರ್ಶಿ ಬಿ.ಎಸ್.ಪ್ರಶಾಂತ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಈ ಸ್ಥಾನದಲ್ಲಿ ಪ್ರೊ.ಕೆ.ಬಿ.ಪ್ರವೀಣ್ ಕರ್ತವ್ಯ ನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net