ಕಂಚ್ಯಾಣಿಗೆ ಡಾ. ಎಚ್​. ನರಸಿಂಹಯ್ಯ ರಾಜ್ಯ ಪ್ರಶಸ್ತಿ

Dr. H. Narasimhaiah State Award for Kanchanyani
ಜಂಬುನಾಥ ಕಂಚ್ಯಾಣಿ
Published on

ವಿಜಯಪುರ : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯ, ಸಾಹಿತಿ ಜಂಬುನಾಥ ಕಂಚ್ಯಾಣಿ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡುವ ಶಿಣ ತ ಡಾ.ಎಚ್​. ನರಸಿಂಹಯ್ಯನವರ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಂಬುನಾಥ ಕಂಚ್ಯಾಣಿ ಅವರ 41 ವರ್ಷಗಳ ಕಾಲ ವಿಾನ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಉತ್ತಮ ಬರಹಗಾರರು ಹಾಗೂ ವಾಗ್ಮಿಗಳಾಗಿದ್ದು, ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ 32 ಗ್ರಂಥಗಳನ್ನು ನೀಡಿದ್ದಾರೆ. ಈವರೆಗೆ 200ಕ್ಕೂ ಅಧಿಕ ಉಪನ್ಯಾಸ ನೀಡಿದ್ದು, ವಿವಿಧ ಪ್ರಶಸ್ತಿಗಳು ಕೂಡ ಅವರಿಗೆ ಒಲಿದಿವೆ.

ಬೆಂಗಳೂರು ವ್ಯಾಪ್ತಿಯ ಬಾಗಲೂರಿನ ವಿಜಯ ಜ್ಯೋತಿ ಕಾಲೇಜು ಆವರಣದಲ್ಲಿ ಡಿ.28 ಹಾಗೂ ಡಿ.29ರಂದು ನಡೆಯುವ ರಾಜ್ಯಮಟ್ಟದ ನಾಲ್ಕನೇ ವೈಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್​ ನಟರಾಜ್​ ಹಾಗೂ ಜಿಲ್ಲಾಧ್ಯ ಸಂಗಮೇಶ ಬುರ್ಲಿ ಪ್ರಕಟಣೆಯಲ್ಲಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net