

ಗೌರಿಬಿದನೂರು: ಬಜೆಟ್‌ಗೂ ಮನ್ನ ನೀಡಿದ್ದ ಭರವಸೆಯಂತೆ ಹಿರಿಯ ಗಾಂಧಿವಾದಿ, ಶಿಕ್ಷಣತಜ್ಞ, ಪದ್ಮಭೂಷಣ ದಿ. ಡಾ.ಎಚ್. ನರಸಿಂಹಯ್ಯ ಹೆಸರಿನಲ್ಲಿ ಪ್ರಾಧಿಕಾರ ರಚನೆಗೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಹಸಿರುನಿಶಾನೆ ತೋರಿದೆ. ಈ ಬಗ್ಗೆ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ೋಷಣೆ ಮಾಡಿದ್ದಾರೆ.
ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಡಾ. ಎಚ್.ನರಸಿಂಹಯ್ಯ ಅವರು ಮಹಾತ್ಮ ಗಾಂಧಿ ಹಾದಿಯಲ್ಲಿ ಬೆಳೆದವರು. ಕೊನೇ ಕ್ಷಣದವರೆಗೆ ಗಾಂಧಿಯಂತೆ ಸರಳ ಜೀವನ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾದವರು. ಜನರಲ್ಲಿ ವಿಚಾರವಂತಿಕೆ. ವೈಜ್ಞಾನಿಕ ಮನೋಭಾವ ಬಿತ್ತುವ ಜತೆಗೆ ಶಿಕ್ಷಣದ ಮಹತ್ವ ಅರಿತು ಬೆಂಗಳೂರು ಮಾತ್ರವಲ್ಲದೆ ಗೌರಿಬಿದನೂರು, ಬಾಗೇಪಲ್ಲಿ ಇತರ ಕಡೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದರು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಡಾ.ಎಚ್.ನರಸಿಂಹಯ್ಯ ಪ್ರಾಧಿಕಾರ ರಚಿಸಬೇಕು ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಿರುವುದರಿಂದ ಎಚ್‌ಎನ್ ಅವರ ಶಿಷ್ಯವೃಂದ ಹಾಗೂ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನುಡಿದಂತೆ ನಡೆದ ಸಿದ್ದರಾಮಯ್ಯ
ನರಸಿಂಹಯ್ಯ ಸ್ವಗ್ರಾಮ ಹೊಸೂರಿನಲ್ಲಿ 1920ರಲ್ಲಿ ಸ್ಥಾಪಿಸಿದ ಶಾಲೆಯಲ್ಲೇ (ಈಗ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ) ವ್ಯಾಸಂಗ ಮಾಡಿ ಉನ್ನತ ಅಧ್ಯಯನಕ್ಕೆ ಬೆಂಗಳೂರಿಗೆ ತೆರಳಿದರು. ಇತ್ತೀಚೆಗೆ ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಹಾಗೂ ಅವರು ಓದಿದ ಶಾಲೆಯ ಶತಮಾನೋತ್ಸವವನ್ನು ನ್ಯಾಷನಲ್ ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಹಾಗೂ ಎಚ್.ಎನ್. ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿ ಡಾ.ಎಚ್.ಎನ್. ಹೆಸರಿನಲ್ಲಿ ಪ್ರಾಧಿಕಾರ ರಚನೆ ಹಾಗೂ ಅವರು ಓದಿದ ಶಾಲೆಯನ್ನು ಉನ್ನತೀಕರಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಚಿಂತಕ ಡಾ.ಎಚ್.ವಿ. ವಾಸು ನೇತೃತ್ವದಲ್ಲಿ ಹಳೆಯ ವಿದ್ಯಾರ್ಥಿಗಳು ಸಿಎಂಗೆ ಮನವಿ ಸಲ್ಲಿಸಿದ್ದರು. ಆದರೆ, ಕಾಲಿಗೆ ಪೆಟ್ಟಾಗಿದ್ದರಿಂದ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಆದರೆ, ಪ್ರಾಧಿಕಾರ ರಚಿಸುವ ಹಾಗೂ ಶಾಲೆ ಅಭಿವೃದ್ಧಿಪಡಿಸುವ ಆಶ್ವಾಸನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮೂಲಕ ನೀಡಿದ್ದರು. ಈಗ ಬಜೆಟ್‌ನಲ್ಲಿ ೋಷಿಸುವ ಮೂಲಕ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ.
ಪ್ರಾಧಿಕಾರದಿಂದ ಪ್ರಗತಿ
ಡಾ.ಎಚ್.ಎನ್. ಪ್ರಾಧಿಕಾರ ತಾಲೂಕಿನಲ್ಲಿ ನರಸಿಂಹಯ್ಯನವರ ಹೆಸರಿನಲ್ಲಿ ನಿರ್ಮಿಸುತ್ತಿರುವ ವಿಜ್ಞಾನ ಪಾರ್ಕ್, ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ.ಎಚ್.ಎನ್.ಅಮರಧಾಮ, ಡಾ.ಎಚ್.ಎನ್.ಕಲಾಭವನ ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ. ಇವುಗಳ ಪ್ರಗತಿಗೆ ನಾಂದಿ ಹಾಡುವ ಜತೆಗೆ ಡಾ.ಎಚ್.ಎನ್ ಅವರ ವೈಜ್ಞಾನಿಕ ವಿಚಾರಧಾರೆ, ಸರಳ ಸಜ್ಜನಿಕೆಯ ಜೀವನದ ಆಶಯಗಳನ್ನು ಯುವ ಪೀಳಿಗೆಗೆ ಮುಟ್ಟಿಸಲು ಸಹಕಾರಿಯಾಗಲಿದೆ.
"ಎಚ್.ಎನ್. ಪ್ರಾಧಿಕಾರ ರಚನೆಗೆ ಸರ್ಕಾರ ಹಸಿರು ನಿಶಾನೆ ತೋರಿರುವುದಕ್ಕೆ ಅಭಿಮಾನಿಗಳು ಹಾಗೂ ಶಿಷ್ಯರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಜನ ಮೌಢ್ಯಗಳಿಂದ ದೂರ ಉಳಿದು ವಿಚಾರವಂತರಾಗಬೇಕು ಎಂಬುದು ನರಸಿಂಹಯ್ಯನವರ ಪ್ರಮುಖ ಆಶಯವಾಗಿತ್ತು. ಇವುಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಕೆಲಸ ಮಾಡಬೇಕು. - ಡಾ.ಎಚ್.ಎಸ್. ಶಶಿಧರ್ ಹಳೇ ವಿದ್ಯಾರ್ಥಿ "ಪ್ರಾಧಿಕಾರ ರಚನೆಗೆ ಅಪಾರ ಕಾಳಜಿ ತೋರಿದ್ದ ಮಾಜಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹಾಗೂ ನಮ್ಮ ಬೇಡಿಕೆಗೆ ಸ್ಪಂದಿಸಿ ಪ್ರಾಧಿಕಾರ ರಚನೆ ಹಾಗೂ ಶಾಲೆ ಉನ್ನತೀಕರಣಕ್ಕೆ ಬಜೆಟ್‌ನಲ್ಲಿ ೋಷಿಸಿರುವ ಸರ್ಕಾರಕ್ಕೆ ಧನ್ಯವಾದಗಳು." - ಎಚ್.ವಿ.ಮಂಜುನಾಥ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ "ಡಾ.ಎಚ್.ನರಸಿಂಹಯ್ಯನವರ ಚಿಂತನೆಗಳನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಚುರಪಡಿಸಬೇಕು ಎಂದು 9 ತಿಂಗಳ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. ಪ್ರಾಧಿಕಾರ ರಚಿಸುವುದಾಗಿ ನೀಡಿದ್ದ ಭರವಸೆಯಂತೆ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. ಎಲ್ಲರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆಗಳು." - ಎನ್.ಎಚ್. ಶಿವಶಂಕರ ರೆಡ್ಡಿ ಮಾಜಿ ಕೃಷಿ ಸಚಿವ "ಡಾ. ಎಚ್.ವಿ.ವಾಸು ಅವರು ಎಚ್.ಎನ್ ಅವರ ಶಿಷ್ಯರಾಗಿದ್ದರು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಚಿಂತಕರ ಚಾವಡಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಪರಿಶ್ರಮದಿಂದಾಗಿ ಪ್ರಾಧಿಕಾರ ೋಷಣೆಯಾಗಿದೆ." - ತಿಮ್ಮಪ್ಪ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ