ಯಕ್ಷಗಾನ ಕಲಾರಂಗ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

udp-4-kalaranga award
Published on

ಉಡುಪಿ: ಜಗತ್ತು ಪರಂಪರೆ ಮತ್ತು ಆಧುನಿಕತೆಯ ಸಂದಿಗ್ಧತೆಯಲ್ಲಿದೆ. ಪರಂಪರೆಯನ್ನು ರ್ನಿಲಸಿದರೆ ಬದುಕು ನಶ್ವರವಾಗುತ್ತದೆ. ಆಧುನಿಕ ಸಮಾಜದಲ್ಲಿ ಪರಂಪರೆಯನ್ನು ಕಾಪಾಡಲು ಇರುವ ಮಾಧ್ಯಮವೇ ಕಲೆ ಎಂದು ಬಹುಭಾಷಾ ವಿದ್ವಾಂಸ, ಶತಾವಧಾನಿ ಡಾ. ಆರ್​. ಗಣೇಶ್​ ಹೇಳಿದರು.

ಶುಕ್ರವಾರ ಐವೈಸಿ ಸಭಾಭವನದಲ್ಲಿ ಯಕ್ಷಗಾನ ಕಲಾರಂಗ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಲೆ ಬದುಕಿದ್ದಾಗ ಮಾತ್ರ ಬೆಲೆ. ಯಕ್ಷಗಾನ ಜೀವಂತ ನಾಟ್ಯಶಾಸ್ತ್ರ. ಭಾರತೀಯ ರಂಗಕಲೆ ವ್ಯಾಪಕವಾಗಿದ್ದು, ದೇಶದ ಮೌಲ್ಯದ ಅರಿವಿಲ್ಲದಿದ್ದರೆ ದೇಶಭಕ್ತಿ ಬೆಳೆಯಲು ಸಾಧ್ಯವಿಲ್ಲ.

ರಂಗದಲ್ಲಿ ಹಲವು ಬಗೆಯ ಸಂದಿಗ್ಧತೆಗಳಿವೆ. ಕಲಾವಿದರಿಗೆ ಮಾತ್ರ ವೇದಾಂತ ಅರ್ಥವಾಗುತ್ತದೆ. ಆಸ್ಥೆ ವಹಿಸಿ ಅಧ್ಯಯನ ಮಾಡಿದಾಗ ಸೂಕ್ಷತೆ ಪರಿಚಯವಾಗುತ್ತದೆ. ಗದ್ಯ, ಪದ್ಯ, ಗೀತೆಗಳಿಂದ ಭಾಷೆಗೆ ಸಮಗ್ರತೆ ಬರುತ್ತದೆ. ಇವು 3 ಬಗೆಯೂ ಯಕ್ಷಗಾನದಲ್ಲಿದೆ. ಹೀಗಾಗಿ ಯಕ್ಷಗಾನ ಸಾಹಿತ್ಯ ಉಪೇೆಸುವಂತಿಲ್ಲ ಎಂದು ಹೇಳಿದರು.

ಹಿರಿಯ ವಿದ್ವಾಂಸ ಲಕ್ಷಿ$್ಮಶ ತೋಳ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಅವಧಾನಿ ವಿದ್ವಾನ್​ ಗುಂಡಿಬೈಲ್​ ಸುಬ್ರಹ್ಮಣ್ಯ ಭಟ್​ ಅಭಿನಂದನಾ ಭಾಷಣಾಗೈದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್​ನ ವಿಶ್ವಸ್ಥೆ ಗಿರಿಜಾ ಶಿವರಾಮ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​, ಪವನ್​ ಕಿರಣ್​ಕೆರೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದ ಯುವ ಕಲಾವಿದರಿಗೆ ಆಯೋಜಿಸಿದ್ದ ನಾಲ್ಕು ದಿನಗಳ ಸನಿವಾಸ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net