ಡಾ.ಗಣನಾಥ ಎಕ್ಕಾರಿಗೆ 'ಜೀಶಂಪ' ರಾಜ್ಯ ಪ್ರಶಸ್ತಿ...

Gananatha
Published on

ಬೆಂಗಳೂರಿನಲ್ಲಿ ಜೂನ್​ 25ರಂದು ಪ್ರದಾನ

ರಾಜ್ಯದ ಪ್ರಥಮ ಜಾನಪದ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲಾ ರೆಡ್​ ಕ್ರಾಸ್​ ಕಾರ್ಯದರ್ಶಿ, ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರಿಗೆ ಬೆಂಗಳೂರಿನ ಕನ್ನಡ ಜಾನಪದ ಪರಿಷತ್​ನ ದಶಮನೋತ್ಸವದ ನಿಮಿತ್ತ ಜೀಶಂಪ ಪ್ರಶಸ್ತಿ ನೀಡಿ ಗೌರವಿಸಲಿದೆ.

ಮೈಸೂರಿನವರಾದ ಜಾನಪದ ಲೋಕದ ವಿದ್ವಾಂಸ ಜಿ.ಶಂ. ಪರಮಶಿವಯ್ಯ (ಜೀಶಂಪ) ಸ್ಮರಣಾರ್ಥ ನೀಡುವ ರಾಜ್ಯ ಪ್ರಶಸ್ತಿ ಇದಾಗಿದ್ದು, ಜಾನಪದ ಸಂಸ್ಕೃತಿಗೆ ಸಲ್ಲಿಸಿದ ಸೇವೆ ಗುರುತಿಸಿ ಡಾ. ಗಣನಾಥ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಜೂ.25ರಂದು ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿರುವ ರಾಜ್ಯದ ಪ್ರಥಮ ಜಾನಪದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಾಲ್ವರು ಸಾಧಕರಿಗೂ ಪ್ರಶಸ್ತಿ

ನ್ಯಾಯಮೂರ್ತಿ ಅರಳಿ ನಾಗರಾಜ, ಜಾನಪದ ಹಿರಿಯ ವಿದ್ವಾಂಸರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಅಪ್ಪಗೆರೆ ತಿಮ್ಮರಾಜು, ಡಾ. ಬಾನಂದೂರು ಕೆಂಪಯ್ಯಅವರಿಗೂ ಜೀಶಂಪ ಪ್ರಶಸ್ತಿ ನೀಡಲಾಗುತ್ತಿದೆ. ರಂಗವಲ್ಲಿ ಕಲೆಯ ಶ್ರೇಷ್ಠ ಕಲಾವಿದೆ ಡಾ. ಭಾರತಿ ಮರವಂತೆ ಅವರಿಗೆ ಕವಿ ಮಧುರ ಚೆನ್ನ ಪ್ರಶಸ್ತಿ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net