ಡಾ. ಗಜಾನನ ಭಟ್ ಹೊಸಪೇಟೆಗೆ ವರ್ಗ, ಪಂಡಿತ ಸಾರ್ವಜನಿಕ ಆಸ್ಪತ್ರೆ ಪ್ರಭಾರ ಆಡಳಿತಾಧಿಕಾರಿಯಾಗಿ ಡಾ. ನೇತ್ರಾವತಿ

30sirsi5 dr. gajanan bhat
Published on

ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಗಜಾನನ ಭಟ್ ಅವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಪ್ರಸೂತಿ ತಜ್ಞೆ ಡಾ. ನೇತ್ರಾವತಿ ಸಿರ್ಸಿಕರ್ ಅವರನ್ನು ಆಸ್ಪತ್ರೆಯ ಪ್ರಭಾರ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ನಿಯುಕ್ತಿಗೊಳಿಸಿ ಆ. 29ರಂದು ಜ್ಞಾಪನಾ ಪತ್ರ ಹೊರಡಿಸಿದ್ದಾರೆ.


ಡಾ. ಗಜಾನನ ಭಟ್ ಜಿಲ್ಲೆಯ ಏಕೈಕ ಮೂತ್ರ ಪಿಂಡ, ಮೂತ್ರ ರೋಗ ತಜ್ಞ ವೈದ್ಯರಾಗಿದ್ದರು. ಶಿರಸಿ ಹೊರತಾಗಿ ಜಿಲ್ಲೆಯ ಹೊನ್ನಾವರ, ಕಾರವಾರ ಹಾಗೂ ಕುಮಟಾದ ಸರ್ಕಾರಿ ಆಸ್ಪತ್ರೆಗೆ ವಾರದಲ್ಲಿ ಒಮ್ಮೆ ಭೇಟಿ ನೀಡಿ ರೋಗಿಗಳ ಪರೀಕ್ಷೆ ನಡೆಸುತ್ತಿದ್ದರು. ಅವರ ವರ್ಗಾವಣೆಯಿಂದ ಮೂತ್ರಪಿಂಡ ತಜ್ಞ ವೈದ್ಯರ ಕೊರತೆ ಉಂಟಾದಂತಾಗಿದೆ. ಕೆಲ ವರ್ಷಗಳಿಂದ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ರೋಗಿಗಳಿಗೆ ತ್ವರಿತ ಸೇವೆ ನೀಡುವ ಮೂಲಕ ಅವರು ನಗರದಲ್ಲಿ ಜನಪ್ರಿಯತೆ ಗಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net