ಪೊಲೀಸರು ತಿಲಕ ಇಡಬಾರದೆಂದು ನಾನು ಎಲ್ಲೂ ಹೇಳಿಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ

G Parameshwar
Published on

ಬೆಂಗಳೂರು: ಪೊಲೀಸರಿಗೆ ಅವರದ್ದೇ ಆದ ನಿಯಮಗಳಿದ್ದು, ಆ ಚೌಕಟ್ಟಿನಲ್ಲಿ ಅವರು ಏನು ಬೇಕಾದರೂ ಮಾಡಿಕೊಳ್ಳಬಹುದು. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದ್ದೇನೆಯೇ ಹೊರತು, ಹಣೆಯಲ್ಲಿ ತಿಲಕ ಇಡಬಾರದೆಂದು ಎಲ್ಲೂ ಹೇಳಿಲ್ಲ. ಇದರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಪೊಲೀಸರು ಹಣೆಗೆ ಕುಂಕುಮ ಇಡಬಾರದೆಂದು ಯಾವುದೇ ಸೂಚನೆ ಕೊಟ್ಟಿಲ್ಲ. ಏನು ಬೇಕಾದರೂ ಬೊಟ್ಟು ಇಟ್ಟುಕೊಳ್ಳಬಹುದು. ಆದರೆ ಪೊಲೀಸರಿಗೆ ಸಮವಸ್ತ್ರ ಇರುತ್ತದೆ. ಗೈಡ್ ಲೈನ್ ಇರುವುದನ್ನು ಪಾಲಿಸಬೇಕು. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಹೇಳದೇ ಇರುವುದನ್ನು ಸುದ್ದಿ ಮಾಡಬಾರದು. ಈ ಬಗ್ಗೆ ವದಂತಿ ಹಬ್ಬಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕೋಮುವಾದ ಒಂದು ಸಮುದಾಯಕ್ಕೆ ಸೇರಿದ್ದಲ್ಲ. ಎಲ್ಲಾ ಸಮುದಾಯದಲ್ಲೂ‌ ಇದೆ. ಕೋಮುವಾದ ತಡೆಗೆ ಪೋಲಿಸ್ ಇಲಾಖೆಯಲ್ಲಿ ಹೊಸ ವಿಂಗ್ ಮಾಡುತ್ತೇವೆ. ಅವರು ಪ್ರಚೋದನೆ ಮಾಡುವವರನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಾರೆ. ಸದ್ಯ ಆ್ಯಂಟಿ ಕಮ್ಯುನಲ್ ವಿಂಗ್​ಗೆ ಮಂಗಳೂರು ಭಾಗದಲ್ಲಿ ಬೇಡಿಕೆ ಬಂದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net