

ಚಿತ್ರದುರ್ಗ: ಕೋವಿಡ್ ವ್ಯಾಕ್ಸಿನ್ ನೆಪದಲ್ಲಿ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಗೂಂಡಾಗಿರಿ ಮಾಡುತ್ತಿಲ್ಲ. ಆದರೆ ರಾಜಕಾರಣ ವನ್ನು ಖಂಡಿತಾ ಮಾಡುತ್ತಿದೆ. ಗೂಂಡಾಗಿರಿ ಎಂದರೆ ಏನೆಂಬುದನ್ನು ಬಿಜೆಪಿ ಅವರೇ ವಿವರಿಸಲಿ ಎಂದು ವ್ಯಂಗವಾಡಿದರು.
ಶಿರಾದಲ್ಲಿ ಈಗಾಗಲೇ ಬಿಜೆಪಿ ಗೆದ್ದಿದ್ದರೆ ಮನೆಗೆ ಹೋಗಬೇಕಿತ್ತು, ಅದನ್ನು ಬಿಟ್ಟು ಮಾಡಬಾರದ್ದನ್ನೆಲ್ಲ ಮಾಡಲು ಅಲ್ಲಿರುವುದು ಯಾ ಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪ್ರಶ್ನಿಸಿದರು. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ಶಿರಾದಲ್ಲಿ ಬಿಜೆಪಿ ಪರ ಸುನಾಮಿ ಎದ್ದಿದೆ ಎಂಬ ವಿಜಯೇಂದ್ರರ ಹೇಳಿಕೆಯನ್ನು ಟೀಕಿಸಿದರು.