

ಕುಮಟಾ: ಇಲ್ಲಿನ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜ್ನ ಪೂರ್ವ ವಿದ್ಯಾರ್ಥಿ ಡಾ. ಗಣಪತಿ ವಿ. ಶಾನಭಾಗ ಕುಮಟಾ ಅವರಿಗೆ ಕೆಮಿಕಲ್ ಸೈನ್ಸ್ನಲ್ಲಿ ಅತ್ಯುತ್ತಮ ಸಂಶೋಧನೆ ಮಾಡಿದ್ದಾರೆ. ಈ ಸಾಧನೆಗೆ ಲಂಡನ್ನಿನ ಫೆಲೋ ಆಫ್ ದಿ ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ (ಎಫ್ಆರ್ಎಸ್ಸಿ) ಅತ್ಯುನ್ನತ ಗೌರವಕ್ಕೆ ಅವರು ಭಾಜನರಾಗಿದ್ದಾರೆ. ಇದು ದೇಶವೇ ಹೆಮ್ಮೆ ಪಡುವ ಸಾಧನೆಯಾಗಿದೆ ಎಂದು ಬಾಳಿಗಾ ಕಾಲೇಜ್ ಪ್ರಕಟಣೆ ತಿಳಿಸಿದೆ. ಪುಣೆಯ ಸಿಎಸ್ಆಯ್ಆರ್ ನ್ಯಾಷನಲ್ಕೆಮಿಕಲ್ ಲೆಬೋರೇಟರಿ ಮತ್ತು ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಸೈಂಟಿಫಿಕ್ ರೀಸರ್ಚ್ನ ಮೆನೇಜಮೆಂಟ್ ಡೈರೆಕ್ಟರ್ ಡಾ. ಎಸ್.ಬಿ. ಹಳ್ಳಿಗುಡಿ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ.