ಡಾ. ಕಲಾಂ ಆದರ್ಶ ಪಾಲನೆ ಮಾಡಿ

Dr. Follow Kalam Adarsh
ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಕಲಾಂ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಂಕರಾನಂದ ಶ್ರೀಗಳು, ಸಿರಾಜ್ ಹೊರಟ್ಟಿ ಇತರರಿದ್ದರು.
Published on

ರಬಕವಿ-ಬನಹಟ್ಟಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೊಸೂರ ಶಂಕರಾನಂದ ಮಠದ ಪರಮಾನಂದ ಶ್ರೀಗಳು ಹೇಳಿದರು.

ಹೊಸೂರ ಗ್ರಾಮದ ಡಾ. ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಿವಿಧೋದ್ದೇಶಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಲಾಂ ಅವರ ಜನ್ಮ ದಿನಾಚರಣೆ ನಿಮಿತ್ತವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಸಂಸ್ಥೆ ಅಧ್ಯಕ್ಷ ಸಿರಾಜ್ ಹೊರಟ್ಟಿ, ಹಿರಿಯರಾದ ಹಾರುನಸಾಬ ಹೊರಟ್ಟಿ, ನೂರಸಾಬ್ ಮುಜಾವರ, ಅಬ್ದುಲ್ ಹೊರಟ್ಟಿ, ಹಸನ ಜಮಾದಾರ, ಹಾಫಿಜ್ ಆದಮ್ ಹೊರಟ್ಟಿ, ಬುರಾನ ತ್ತೆ, ಶಾರು ಹೊರಟ್ಟಿ, ಚಾಂದ ಹುಡೇದಮನಿ, ರಿಯಾಜ್ ಜಮಖಂಡಿ, ಶರೀಫ್ ಹುಡೆದಮನಿ, ಇಮಾಮ್ ಹೊರಟ್ಟಿ, ರೀದ್ ಅತ್ತಾರ, ದಿಲಾವರ ಫಣಿಬಂದ, ಅಬುಬಕ್ಕರ ಹೊರಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net