ಐಎಪಿ ಕಾಸರಗೋಡು ಚಾಪ್ಟರ್‌ಗೆ ಡಾ.ದಿವಾಕರ ರೈ ಅಧ್ಯಕ್ಷ

Ksd_Diwakar Rai
Published on

ಕಾಸರಗೋಡು: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್(ಐಎಪಿ) ಕಾಸರಗೋಡು ಚಾಪ್ಟರ್‌ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯಾಧ್ಯಕ್ಷ ಡಾ.ಐ.ರಿಯಾಜ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ಡಾ.ಪಿ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಡಾ.ಎ.ಸಂತೋಷ್ ಕುಮಾರ್ ಇದ್ದರು. ರಾಷ್ಟ್ರೀಯ ಇಐ ಸದಸ್ಯ ಡಾ.ಜಾನಿ ಸೆಬಾಸ್ಟಿಯನ್, ಐಎಂಎ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ, ಹಿರಿಯ ಮೈಕ್ರೋಬಯಾಲಜಿಸ್ಟ್ ಡಾ.ರೇಖಾ ರೈ, ಚರ್ಮರೋಗ ತಜ್ಞೆ ಡಾ.ಸುಧಾ, ಐಎಂಎ ಮಾಜಿ ಕಾರ್ಯದರ್ಶಿ ಡಾ.ಜಿತೇಂದ್ರ ರೈ, ಡಾ.ಅಲಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಡಾ.ದಿವಾಕರ ರೈ ಅವರನ್ನು ಆಯ್ಕೆ ಮಾಡಲಾಯಿತು. ಡಾ.ಮಾಹಿನ್ ಪಿ.ಅಬ್ದುಲ್ಲ ಕಾರ್ಯದರ್ಶಿ ಹಾಗೂ ಡಾ.ಸುಕೇಶ್ ರಾಜ್ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

ಮಕ್ಕಳ ಸ್ಕ್ರೀನ್ ಟೈಂ, ಬೆಳವಣಿಗೆ ಕುಂಠಿತದ ಬಗ್ಗೆ ಅವಲೋಕನ, ರೋಗ ನಿರೋಧಕ ಲಸಿಕೆ ವಿತರಣೆ, ತಾಯಿಹಾಲುಣಿಸುವಿಕೆ, ಪೂರಕ ಆಹಾರ ಮತ್ತು ಜ್ವರ ಮುಂತಾದ ವಿಷಯಗಳ ಕುರಿತು ತಜ್ಞರು ವಿಷಯ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net