ಕಾಂಪ್ಯೂಟೇಷನಲ್ ಬೈಯಾಲಜಿಯಿಂದ ಪರಿಣಾಮಕಾರಿ ಚಿಕಿತ್ಸೆ

4 smg Dr Deepali Gupta
Published on

ಶಿವಮೊಗ್ಗ: ಕಾಂಪ್ಯೂಟೇಷನಲ್ ಬೈಯಾಲಜಿ ತಂತ್ರಜ್ಞಾನ ಅನುಷ್ಟಾನಗೊಳಿಸುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ನಾವಿನ್ಯಯುತ ಬದಲಾವಣೆಗಳು ಸಾಧ್ಯ ಎಂದು ಪಂಜಾಬ್‌ನ ಚಿತ್ಕಾರ್ ವಿವಿ ಪ್ರಾಧ್ಯಾಪಕಿ ಡಾ. ದೀಪಾಲಿ ಗುಪ್ತಾ ಅಭಿಪ್ರಾಯಪಟ್ಟರು.

ನಗರದ ಜೆಎನ್‌ಎನ್‌ಇ ಕಾಲೇಜಿನ ಇನ್ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಹಾಗೂ ಕೇಂದ್ರವ ಸರ್ಕಾರದ ಎಐಸಿಟಿಇ ಟಿಚಿಂಗ್ ಲರ್ನಿಂಗ್ ಅಕಾಡೆಮಿಯಿಂದ ಉಪನ್ಯಾಸಕರಿಗೆ ‘ಕಾಂಪ್ಯೂಟಿಂಗ್ ಕನ್ಟ್ರಕ್ಟ್ ಫಾರ್ ಮಾಡೆಲಿಂಗ್ ಬೈಯೊಲಜಿ’ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯ ಸ್ಥಿತಿಯ ದತ್ತಾಂಶಗಳ ಅಧ್ಯಯನ ನಡೆಸಿ ವೇಗದ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಕಾಂಪ್ಯೂಟೇಷನಲ್ ಬೈಯಾಲಜಿ ಪೂರಕ. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನದ ಸಂಗಮವಾದ ಕಾಂಪ್ಯೂಟೇಷನಲ್ ಬೈಯಾಲಜಿಯಲ್ಲಿನ ಸಂಶೋಧನೆಯ ಮುಂದುವರಿದ ಭಾಗವಾಗಿ ನಾಳಿನ ಪರಿಸರದಲ್ಲಿನ ಹವಾಮಾನದ ಆಧಾರದ ಮೇಲೆ ವ್ಯಕ್ತಿಯ ಆರೋಗ್ಯದಲ್ಲಾಗುವ ಬದಲಾವಣೆಗಳ ಕುರಿತು ವೇಗವಾಗಿ ಊಹಿಸಬಹುದು ಎಂದು ಹೇಳಿದರು.

ಎನ್‌ಇಎಸ್ ಅಧ್ಯಕ್ಷ ಎ.ಎಸ್.ವಿಶ್ವನಾಥ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆಗಳಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ಹಲವು ವಿಷಯಗಳು ಅನುಷ್ಟಾನಗೊಂಡಾಗ ಜಾಗತಿಕವಾಗಿ ಆರೋಗ್ಯ ಕ್ಷೇತ್ರದ ಮೇಲೆ ಎದುರಾಗುವ ಅನೇಕ ಸವಾಲುಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯ ಎಂದು ಹೇಳಿದರು.

ಎನ್‌ಇಎಸ್ ಉಪಾಧ್ಯಕ್ಷ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಖಜಾಂಚಿ ಸಿ.ಆರ್.ನಾಗರಾಜ, ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ, ಮೂಲಸೌಕರ್ಯ ವಿಭಾಗದ ಡೀನ್ ಡಾ. ಎಂ.ಎಂ.ರಜತ್ ಹೆಗಡೆ, ಇನ್ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಸಂಜೀವ್ ಕುಂಟೆ, ಕಾರ್ಯಾಗಾರ ಸಂಯೋಜಕ ಗಿರೀಶ್ ಮಂತ, ಸುದೀಪ್ ಮನೋಹರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net