ಡಾ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

Dr. heggade....
Published on

ಬೆಳ್ತಂಗಡಿ: ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಬುಧವಾರ ಭೇಟಿ ಮಾಡಿದ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ನಿಯೋಗ, ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ನೀಡಿದ ಗೌರವ ಅಭಿನಂದನೆಯ ಸಂದೇಶ ಪತ್ರ ಮತ್ತು ದೇವರ ಪ್ರಸಾದವನ್ನು ಡಾ.ಹೆಗ್ಗಡೆಯವರಿಗೆ ಸಮರ್ಪಿಸಿತು.

ಗೋಕರ್ಣದ ಕೌಶಿಕೆಯಲ್ಲಿ ವ್ರತಾಚರಣೆ ನಡೆಸುತ್ತಿರುವ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಡಾ.ಹೆಗ್ಗಡೆಯವರನ್ನು ಆಮಂತ್ರಿಸಲಾಯಿತು. ಶ್ರೀ ರಾಮಚಂದ್ರಾಪುರ ಮಠ ಹಾಗೂ ರಾಘವೇಶ್ವರ ಭಾರತಿ ಶ್ರೀಗಳ ಪರವಾಗಿ ಹರಿಪ್ರಸಾದ ಪೆರಿಯಪ್ಪು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಎಂ.ಪರಮೇಶ್ವರ ಭಟ್ ವೇಣೂರು, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಅತ್ತಾಜೆ ಕೇಶವ ಭಟ್, ಉಂಡೆಮನೆ ವಿಶ್ವೇಶ್ವರ ಭಟ್, ಅತ್ತಾಜೆ ಶ್ಯಾಮ್ ಭಟ್, ಭಾಗ್ಯಲಕ್ಷ್ಮೀ ಮಾನಸ, ವಿದ್ಯಾ ಕುಮಾರ್ ಕಾಂಚೋಡು, ಶ್ರೀಕೃಷ್ಣ ನೀರಮೂಲೆ, ಕೃಷ್ಣ ಭಟ್ ಹತ್ತೊಕ್ಕಲು, ಶಿವಪ್ರಸಾದ ಕೈಲಾಸ, ಉಜಿರೆ ಪ್ರಗತಿನಗರದ ಕೃಷ್ಣ ಭಟ್, ಸುಶೀಲಾ ಭಟ್ ವಾದ್ಯಕೋಡಿ, ಮಹಾಬಲೇಶ್ ಬರೆಮನೆ, ಉಂಡೆಮನೆ ಶಂಭು ಶರ್ಮ ಮೊದಲಾದವರು ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net