ಸೋದೆ ಸದಾಶಿವರಾಯ ಪ್ರಶಸ್ತಿಗೆ ಡಾ. ಡಿ.ವಿ. ಪರಮಶಿವಮೂರ್ತಿ ಆಯ್ಕೆ

SIRSI AWARD
Published on

ಶಿರಸಿ: ಇತಿಹಾಸದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳುತ್ತಿರುವ ನಾಡಿನ ಪ್ರತಿಷ್ಠಿತ ಸೋಂದಾ ಇತಿಹಾಸೋತ್ಸವ, ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಹಾಗೂ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 19 ಮತ್ತು 20ರಂದು ತಾಲೂಕಿನ ಸೋಂದಾ ಸ್ವಾದಿ ಜೈನಮಠದಲ್ಲಿ ನಡೆಯಲಿದೆ.

ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ವಿಶೇಷವಾಗಿ ಸೋದೆ ಸದಾಶಿವರಾಯರ ಪೇಟವನ್ನು ಒಳಗೊಂಡಿದೆ.

ಅಕ್ಟೋಬರ್ 19ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಸ್ವಾದಿ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಇತಿಹಾಸ ಸಂಶೋಧಕಿ ಡಾ. ವಸುಂಧರಾ ಫಿಲಿಯೋಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕ ಡಾ. ಲಕ್ಷಿ ್ಮಶ ಸೋಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net