

ಮಮದಾಪುರ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆಡಾ.ಡಿ.ಸಿ.ಪಾವಟೆ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹದಯ ರೋಗ ತ ಡಾ.ಸಿದ್ದಣ್ಣ ಕಮತ ಹೇಳಿದರು.
ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಡಾ.ಡಿ ಸಿ ಪಾವಟೆ ಜನ್ಮದಿನ ಪ್ರಯುಕ್ತ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ 7ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಗಣಿತ ಸ್ಪರ್ಧಾ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಪಾವಟೆ ಅವರು ಕಡು ಬಡತನ ರೇಖೆಯಲ್ಲಿ ಶಿಕ್ಷಣವನ್ನು ಪಡೆದು ವಿವಿಧ ಹುದ್ದೆ ಅಲಂಕರಿಸಿದ್ದಾರೆ. ಅವರ ಆದರ್ಶ ವಿದ್ಯಾರ್ಥಿಗಳು ಅಳವಡಿಸಿಕೊಂಡು ಓದಿನತ್ತ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು."'
ಪಿಡಿಒ ವಿನಾಯಕ ಮಾಳಿ ಮಾತನಾಡಿ, ಶಾಲೆಯ ಆವರಣದ ಪಾವಟೆ ಸ್ಮಾರಕ ಸುಂದರಗೊಳಿಸಲು ಗ್ರಾಮ ಪಂಚಾಯಿತಿ ವತಿಯಿಂದ ಉದ್ಯಾನವನ ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಮೇಲ್ಚಾವಣಿ ನಿರ್ಮಿಸಲಾಗುವುದು ಎಂದರು.
ಡಾ.ಡಿ.ಸಿ.ಪಾವಟೆ ಅವರ ಸ್ಮಾರಕಕ್ಕೆ ಕುಟುಂಬಸ್ಥರ ಸನ್ನಿಧಿಯಲ್ಲಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಜಿವಿವಿ ಸಂದ ಅಧ್ಯ ಎಂ. ಆರ್. ಕಮತ, ಕಾರ್ಯದರ್ಶಿ ಈರಣ್ಣ ಜನಮಟ್ಟಿ, ಆರ್.ಪಿ.ಪಾವಟೆ, ಪ್ರತಿಕ ಪಾವಟೆ, ಸಂತೋಷ ಪಾವಟೆ, ಗಜಾನನ ಮನ್ನಿಕೇರಿ, ಸುರೇಶ ಸನದಿ, ಕೆಂಪಣ್ಣ ಮೆಲನ್ನವರ, ಎಸ್.ಎಸ್.ಪಟಗುಂದಿ, ಎಂ.ಎಸ್.ಹಿತ್ತಲಮನಿ, ಟಿ.ಡಿ.ಗಾಣಗಿ, ಎಸ್.ಜಿ.ಕಮತ, ಎಸ್.ಆರ್. ಕಮತ, ಎಂ.ಎಸ್.ಮುರಗೋಡ, ಎ.ಎನ್.ತೋಟಗಿ, ಎಂ.ಪಿ.ಕೊಣ್ಣೂರ, ಸುರೇಶ ನಾಗನೂರು, ಎಸ್.ಬಿ.ಸೊಂಡೂರ, ಮಹೇಶ ಪಾಟೀಲ, ಮುಖ್ಯ ಶಿಕ ರವೀಂದ್ರ ದೇಮಶೆಟ್ಟಿ ಇತರರು ಇದ್ದರು. ಎಂ.ಬಿ.ಹಾದಿಮನಿ ನಿರೂಪಿಸಿದರು.ಸಿ.ಎಂ.ಪಠಾತ ವಂದಿಸಿದರು.