ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನಾಚರಣೆ

25 vikram 9
Published on

ಧಾರವಾಡ: ಶ್ರೀ ಧರ್ಮಸ್ಥಳ ವೈದ್ಯಕೀಯ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನ ನಿಮಿತ್ತ ವಿಶ್ವ ವಿದ್ಯಾಲಯ ವರ್ಷಾಚರಣೆ ಎಸ್‌ಡಿಎಂ ವಿದ್ಯಾಲಯದಲ್ಲಿ ಶನಿವಾರ ಜರುಗಿತು.
ಕರ್ನಲ್ ಸುಶೀಲಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ಅಶೋಕ ಶೆಟ್ಟರ್ ವಿಶೇಷ ಉಪನ್ಯಾಸ ನೀಡಿದರು. ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಮಾತನಾಡಿದರು. ವಿಶ್ವ ವಿದ್ಯಾಲಯದ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರಕುಮಾರ್, ಡಾ. ಎಸ್. ಕೆ. ಜೋಶಿ, ಕುಲಸಚಿವ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿ ವಿ. ಜಿ. ಪ್ರಭು, ಇತರರು ಇದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರತ್ನಮಾಲಾ ದೇಸಾಯಿ ಸ್ವಾಗತಿಸಿದರು. ಡಾ. ರಘುನಾಥ ಶಾನಭಾಗ ನಿರೂಪಿಸಿದರು. ಡಾ. ಅಜಂತಾ ಜಿ.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net