ಡಾ.ಕೋರೆ ಸೊಸೈಟಿಗೆ 49 ಲಕ್ಷ ರೂ. ಲಾಭ

15Athni1
Published on

ಅಥಣಿ: ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿಯ ಅಥಣಿ ಶಾಖೆ ಆರ್ಥಿಕ ವರ್ಷದಲ್ಲಿ 49 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿಯ ಅಥಣಿ ಶಾಖೆಯ 15ನೇ ವಾರ್ಷಿಕೊತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2023-24ನೇ ಸಾಲಿನಲ್ಲಿ 24.51 ಕೋಟಿ ರೂ. ಠೇವು ಸಂಗ್ರಹಿಸಿ 10.86 ಕೋಟಿ ರೂ. ಸಾಲ ವಿತರಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ 143.69 ಕೋಟಿ ರೂ. ಅಧಿಕ ವಹಿವಾಟು ನಡೆಸಿ 49 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಶಾಖೆ ಪ್ರಗತಿ ಪಥದಲ್ಲಿ ಸಾಗಿದೆ. ಸಂಸ್ಥಾಪಕ ಡಾ.ಪ್ರಭಾಕರ ಕೋರೆ, ಮುಖ್ಯ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ಕರೋಶಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಡಾ.ಪ್ರಭಾಕರ ಕೋರೆ ಅವರು ಆರೋಗ್ಯ, ಶಿಕ್ಷಣ, ಸಹಕಾರ, ಔದ್ಯೋಗಿಕ, ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದ್ದಾರೆ. ಕೆಎಲ್‌ಇ ಆಸ್ಪತ್ರೆ ಜನರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಇದೀಗ ಸಹಕಾರ ಕ್ಷೇತ್ರವನ್ನು ನೆರೆಯ ರಾಜ್ಯಗಳಿಗೂ ವಿಸ್ತರಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಶಾಖೆಯ ಸಲಹಾ ಸಮಿತಿ ಸದಸ್ಯರಾದ ಅಲ್ಲಪ್ಪ ನಿಡೋಣಿ, ಪ್ರಕಾಶ ಪಾಟೀಲ, ಸುನೀಲ ಶಿವಣಗಿ, ವಿಕಾಸ ರಾಠೋಡ, ಮಹಾಂತೇಶ ಅವ್ವನಗೋಳ, ಸಿದ್ದಪ್ಪ ಮುದಕ್ಕಣವರ, ಮಹೇಶ ಚೌಗಲಾ, ಬಸವರಾಜ ಬಸಗೌಡರ, ವಿಜಯ ಪಾಟೀಲ, ಶಂಭುಲಿಂಗ ಮಮದಾಪುರ ವ್ಯವಸ್ಥಾಪಕ ವಿ.ಎ.ಮೊಹಿತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net