

ಬೆಳಗಾವಿ: ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಮ್ಮ ಮನೆಯಲ್ಲಿದ್ದ 1934ರ ಮಾಡೆಲ್ ಫೋರ್ಡ್ ಸಲೂನ್ ಕಾರನ್ನು ಬೆಳಗಾವಿ ಮರಾಠಾ ಲೈಟ್ ಇನ್ಫಾ$್ಯಂಟ್ರಿ ರೆಜಿಮೆಂಟಲ್ ಸೆಂಟರ್ ಕಮಾಂಡೆಂಟ್ ಬಿಗ್ರೇಡಿಯರ್ ಜಾಯದೀಪ ಮುಖರ್ಜಿ ಅವರಿಗೆ ಹಸ್ತಾಂತರಿಸಿದರು.
ಕೋರೆ ಅವರ ಪ್ರೀತಿಯ ಪ್ರತಿಕವಾಗಿದ್ದ ಫೋರ್ಡ್ ಕಾರ್ ತಂದೆಯವರ ನೆನಪಿನ ಪ್ರತಿಕವಾಗಿ ಜತನದಿಂದ ಇಟ್ಟುಕೊಂಡಿದ್ದರು. ಜಾಯದೀಪ ಮುಖರ್ಜಿ ಮಾತನಾಡಿ, ಇದೊಂದು ಅತ್ಯಂತ ಹಳೆಯ ಮಾದರಿಯ ಅಪರೂಪದ ಫೋರ್ಡ್ ಸಲೂನ್ ಕಾರ್. ನಮ್ಮ ಪಾರಂಪರಿಕ ರೆಜಿಮೆಂಟಲ್ ಸೆಂಟರ್ಗೆ ಡಾ.ಕೋರೆ ಕೊಡುಗೆ ಅಮೂಲ್ಯ. ಈ ವಿಂಟೇಜ್ ಕಾರು ನಮ್ಮ ಎಂಎಲ್ಐಆರ್ಸಿ ಸಂಗ್ರಹಾಲಯಕ್ಕೆ ಸೇರ್ಪಡೆಯಾಗಲಿದೆ ಎಂದು ಹೇಳಿದರು. ಡೆಪ್ಯೂಟಿ ಕಮಾಂಡೆಂಟ್ ಕರ್ನಲ್ ವಿಕೆಬಿ ಪಾಟೀಲ, ಮರಾಠಾ ಲು ಪದಾತಿದಳದ ಸಿಬ್ಬಂದಿ ಇತರರಿದ್ದರು.
ಆರ್ಮಿ ಸಂಗ್ರಹಾಲಯಕ್ಕೆ, ವಿಂಟೇಜ್ ಕಾರ್ ನೀಡಿದ ಡಾ.ಕೋರೆ,